Select Page

Video – ಕನ್ನಡ ಸಿನೆಮಾಗೆ ಮೊದಲಬಾರಿ ಬಣ್ಣ ಹಚ್ಚಿದ ಬಿ ಎಸ್ ವೈ

Video – ಕನ್ನಡ ಸಿನೆಮಾಗೆ ಮೊದಲಬಾರಿ ಬಣ್ಣ ಹಚ್ಚಿದ ಬಿ ಎಸ್ ವೈ

ಬೆಂಗಳೂರು : ಸಾಮಾನ್ಯವಾಗಿ ರಾಜಾಹುಲಿ ಬಿ ಎಸ್ ಯಡಿಯೂರಪ್ಪನವರ ಗರ್ಜನೆಯನ್ನು ವಿಧಾನಸೌಧ ಸೇರಿದಂತೆ ರಾಜಕೀಯ ಕಾರ್ಯಕ್ರಮಗಳಲ್ಲಿ ನೋಡಿರಬಹುದು, ಆದರೆ ಇದೇನಪ್ಪಾ ನಮ್ಮ ರಾಜಾಹುಲಿ ಚಲನಚಿತ್ರದಲ್ಲಿ ನಟಿಸುತ್ತಿದ್ದಾರಾ ಅಂತಿರಾ ಹೌದು ಇದು ಸತ್ಯ.

ಈ ಕುರಿತು ಒಂದು ವೀಡಿಯೋ ಹಂಚಿಕೊಂಡಿದ್ದು ಮತ್ಯಾರು ಅಲ್ಲ, ಕರ್ನಾಟಕ ಖ್ಯಾತ ಸಂಪಾದಕ ವಿಶ್ವೇಶ್ವರ ಭಟ್. ತಮ್ಮ ಫೇಸ್ಬುಕ್ ಖಾತೆಯಲ್ಲಿ ರಾಜಾಹುಲಿ ಯಡಿಯೂರಪ್ಪ ನಟಿಸಿರುವ ವೀಡಿಯೋ ಹಂಚಿಕೊಂಡಿದ್ದಾರೆ. ಯಡಿಯೂರಪ್ಪನರ ಕಾವೇರಿ ನಿವಾಸಿದಲ್ಲಿ ಚಿತ್ರೀಕರಣ ನಡೆದಿದ್ದು ಮೊದಲಬಾರಿಗೆ ಬಿಎಸ್ ವೈ ಬಣ್ಣ ಹಾಕಿದ್ದಾರೆ.

ಈ ಕುರಿತು ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಮಾಹಿತಿ ನೀಡಿದ್ದು ಕಾವೇರಿ ನಿವಾಸದಲ್ಲಿ ತನುಜಾ ಚಲನಚಿತ್ರದ ಚಿತ್ರೀಕರಣದಲ್ಲಿ ಯಡಿಯೂರಪ್ಪ ಎಂಬ ಪಾತ್ರದಲ್ಲಿ ಮಾಜಿ ಸಿಎಂ ಬಿಎಸ್ ವೈ ನಟಿಸಿದ್ದು, ಪತ್ರಕರ್ತರ ಪಾತ್ರದಲ್ಲಿ ವಿಶ್ವೇಶ್ವರ ಭಟ್ ಕಾಣಿಸಿಕೊಂಡಿದ್ದಾರೆ. ಈ ಕುರಿತಾದ ಚಿತ್ರೀಕರಣ ನಡೆದಿದ್ದು ಸಿನೆಮಾ ಬಗ್ಗೆ ಕುತೂಹಲ ಮೂಡಿದೆ.

ಜೊತೆಗೆ ವೃತ್ತಿಪರರಂತೆ ಯಡಿಯೂರಪ್ಪ ನಟನೆ ಮಾಡಿದ್ದಾರೆ ಎಂಬ ಮಾತನ್ನು ವಿಶ್ವೇಶ್ವರ ಭಟ್ ಹಂಚ್ಚಿಕೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!