Select Page

ಹಿಂದೂ ಯುವಕನ ಕೊಲೆ : ಎಲ್ಲೆಡೆ ಆಕ್ರೋಶ

ಹಿಂದೂ ಯುವಕನ ಕೊಲೆ : ಎಲ್ಲೆಡೆ ಆಕ್ರೋಶ

ಬೆಂಗಳೂರು : ಶಿವಮೊಗ್ಗ ಹಿಂದು ಯುವಕನ ಹತ್ಯೆ ಖಂಡಿಸಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು ಈ ಕುರಿತಾದ ವರದಿ.

ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ ಅಮಾನವೀಯ. ಆ ಯುವಕನ ಕುಟುಂಬಕ್ಕೆ ನನ್ನ ಸಾಂತ್ವನಗಳು. ಈ ಕೊಲೆಯ ಹಿಂದೆ ಯಾರೇ ಇದ್ದರೂ  ಅವರನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎನ್ನುವುದು ಸರಕಾರಕ್ಕೆ ನನ್ನ ಒತ್ತಾಯ. ರಾಜ್ಯದಲ್ಲಿ ಇಂಥ ಘಟನೆಗಳು ಪದೇ ಪದೆ ನಡೆಯುತ್ತವೆ. ಇಂಥ ಘಟನೆಗಳ ಬೆಂಕಿಯಲ್ಲಿ ರಾಷ್ಟ್ರೀಯ ಪಕ್ಷಗಳು ಚಳಿ ಕಾಯಿಸಿಕೊಳ್ಳುತ್ತವೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ರಾಜ್ಯದಲ್ಲಿ ಅಂತವೇ ಕೆಟ್ಟ, ಭಯಾನಕ  ಘಟನೆಗಳು ನಡೆಯುತ್ತಿವೆ.

ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಂಥ ಘಟನೆಗಳು ನಡೆಯುತ್ತಿವೆ ಎನ್ನುವುದು ನನ್ನ ಅನುಮಾನ. ರಾಷ್ಟ್ರೀಯ ಪಕ್ಷಗಳಿಗೆ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಜನರ ಬಳಿಗೆ ಹೋಗಲು ವಿಷಯ ಇಲ್ಲ. ಕೇವಲ ಭಾವನಾತ್ಮಕ ಅಂಶಗಳ ಮೂಲಕ ‘ಹಿಂಸಾ ರಾಜಕಾರಣ’ವನ್ನು ಮಾಡಲು ಎರಡೂ ಪಕ್ಷಗಳು ಹೊರಟಿವೆ.

ಹತ್ಯೆಗೀಡಾದ ಯುವಕನಿಗೆ ಮೊದಲೇ ಜೀವ ಬೆದರಿಕೆ ಇತ್ತೆಂದು, ಪೊಲೀಸರಿಗೆ ದೂರು ಕೊಡಲಾಗಿತ್ತು ಎಂದು ಹೇಳುತ್ತಿದ್ದಾರೆ.
ಹಾಗಾದರೆ ಆ ಯುವಕನಿಗೆ ರಕ್ಷಣೆ ಯಾಕೆ ಕೊಡಲಿಲ್ಲ. ಇದಕ್ಕೆ ಉತ್ತರ ಬೇಕಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು 2023ರ ಚುನಾವಣೆಗೆ ಸದನದಲ್ಲಿ ಗದ್ದಲ ಎಬ್ಬಿಸುವ ಮೂಲಕ ಟ್ರೈಲರ್ ಬಿಟ್ಟಿದ್ದು, ಸಿನಿಮಾ ಬಾಕಿ ಇದೆ ಎಂದಿದ್ದೆ. ಶಿವಮೊಗ್ಗ ಘಟನೆಯ ಮೂಲಕ ರಾಷ್ಟ್ರೀಯ ಪಕ್ಷಗಳು ಹಿಂಸಾ ರಾಜಕಾರಣದ ಪೂರ್ಣ ಸಿನಿಮಾ ತೋರಿಸಲು ಹೊರಟಿದ್ದಾರೆ. ಜನರ ಸೂಕ್ಷ್ಮ ಭಾವನೆಗಳು ಹಾಗೂ ಸಮಾಜದ ಶಾಂತಿಯನ್ನು ಅಪಾಯಕ್ಕೆ ಒಡ್ಡಿ ಬೇಳೆ ಬೇಯಿಸಿಕೊಳ್ಳುತ್ತಿರುವ ‘ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣ’ಕ್ಕೆ ಕ್ಷಮೆಯೇ ಇಲ್ಲ.
ಈಗ ಒಂದು ಅಮೂಲ್ಯ ಪ್ರಾಣ ಹೋಗಿದೆ. ಅದಕ್ಕೆ ಯಾರು ಹೊಣೆ? ರಾಜಕಾರಣಿಗಳು ಮೂರು ದಿನ ಹೋದ ಪ್ರಾಣದ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸಿ, ಹತ್ತು ಲಕ್ಷ ಪರಿಹಾರ ಕೊಟ್ಟರೆ ಸಾಕೇ?. ಇಂತಹ ಹಿಂಸಾ ಪ್ರವೃತ್ತಿಗೆ ಕೊನೆ ಎಂದು..?

ಮಾಜಿ ಸಿಎಂ – ಕುಮಾರಸ್ವಾಮಿ

ಶಿವಮೊಗ್ಗದಲ್ಲಿ ನಿನ್ನೆ ಹಿಂದೂಪರ ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆ ಆಗಿದೆ..ಹರ್ಷ ಹಿಂದೂಪರ ಹೋರಾಟ ಮಾಡ್ತಾ ಇರೋದಕ್ಕೆ ಕೊಲೆ ಮಾಡಿದ್ದು ಅನ್ನೋದೇ ಆದ್ರೆ ಅದಕ್ಕಿಂತ ದುರ್ದೈವ ಮತ್ತೊಂದಿಲ್ಲ.
ಬಿನ್ನಾಭಿಪ್ರಾಯಗಳು ಏನೇ ಇರಲಿ ಅವು ಜೀವ ತೆಗೆಯುವ ಮಟ್ಟಕ್ಕೆ ಹೋಗಬಾರದು..

ಹಿಂದುತ್ವದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ,ಈ ಪ್ರಕರಣದಲ್ಲಿ ಎಷ್ಟು ಮುತುವರ್ಜಿ ವಹಿಸಿ ಆರೋಪಿಗಳಿಗೆ ಶಿಕ್ಷೆ ಕೊಡುವ ಹಾಗೇ ಮಾಡುತ್ತೆ ನೋಡ್ಬೇಕು.ಹಿಂದೂಪರ ಕಾರ್ಯಕರ್ತರ ಕೊಲೆ ಇದು ಮೊದಲೆನು ಅಲ್ಲ..ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಕೂಡಾ ಆಗ್ತಾ ಇತ್ತು..ಈಗ ಪ್ರಕರ ಹಿಂದುತ್ವವಾದಿ ಬಿಜೆಪಿ ಸರಕಾರ ಇದ್ದಾಗಲೂ ಆಗ್ತಾ ಇವೆ..ಹಿಂದೂ ಯುವಕರನ್ನ ಮುಂದೆ ಇಟ್ಟುಕೊಂಡು ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುತ್ತೇ ಎನ್ನುವುದಕ್ಕೆ ಇದು ಸ್ಪಷ್ಟ ಸಾಕ್ಷಿ.

ಯುವಕನ ಮನೆಯವರ ಆಕ್ರಂದನ ನೋಡಿದರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ..ಆ ಯುವಕನನ್ನೇ ನಂಬಿಕೊಂಡಿದ್ದ ಕುಟಂಬದ ಮುಂದಿನ ಗತಿ ಏನು? ಹಿಂದೂಪರ ಹೋರಾಟ ಮಾಡ್ತಾ ಇರುವ ಯುವಕರು ರಾಜಕೀಯ ನಾಯಕರ ಪೋಳು ಭಾಷಣಗಳಿಗೆ,ಸ್ಟೇಜ್ ಮೇಲೆ ನಿಂತು ದೊಡ್ಡದಾಗಿ ಭಾಷಣ ಬಿಗಿಯುವ ಭಾಷಣಕಾರರ ಭಾಷಣಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಕಳೆದುಕೊಳ್ತಾ ಇದಾರೆ ಇದು ಮಾತ್ರ ಸತ್ಯ, ಈಗ ಹರ್ಷನ ಕುಟುಂಬಕ್ಕೆ ಆಧಾರವಾಗಲೂ ಯಾವ ರಾಜಕೀಯ ನಾಯಕನು ಬರುವುದಿಲ್ಲ ಯಾವ ಭಾಷಣಕಾರ ಕೂಡಾ ಬರುವುದಿಲ್ಲ..

– ಹೊರನಾಡ ಕನ್ನಡಿಗ ಪ್ರಕಾಶ್

ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮೇಲಿನ ಕೇಸ್ ವಾಪಸ ತಗೆಯದ ಕರ್ನಾಟಕದ ಷಂಡ ಸರ್ಕಾರ ಹಿಂದೂಗಳನ್ನ ರಕ್ಷಣೆ ಮಾಡುತ್ತಾರೆ ಎಂಬುದು ಮೂಡನಂಬಿಕೆ.

– ಪ್ರವೀಣ್ ತಾಂಬೆ

ಪ್ರತಿಸಲ ಹತ್ಯೆ ಆಗೋದು ಸಾಮಾನ್ಯ ಕುಟುಂಬದ ಕಾರ್ಯಕರ್ತರೇ ಹೊರತು …ಯಾವ ರಾಜಕಾರಣಿ ಮಗ ಕೂಡ ಅಲ್ಲ ಇವರಿಗೆಲ್ಲ ಹಿಂದುತ್ವ ವೋಟಿಗೋಸ್ಕರ ಅಷ್ಟೇ..

ಅವಿನಾಶ್ ಹಿರೇಮಠ

Advertisement

Leave a reply

Your email address will not be published. Required fields are marked *

error: Content is protected !!