Select Page

ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿಗೆ ಪತ್ರಕರ್ತ ಪದ್ಮರಾಜ ದಂಡಾವತಿ ಸೇರಿ ಮೂವರ ಆಯ್ಕೆ

ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿಗೆ ಪತ್ರಕರ್ತ ಪದ್ಮರಾಜ ದಂಡಾವತಿ ಸೇರಿ ಮೂವರ ಆಯ್ಕೆ

ಬೆಳಗಾವಿ : 2021-22 ನೇ ಸಾಲಿನ ಡಾ.ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಸಂಶೋಧನ ಪ್ರಶಸ್ತಿಯನ್ನು ಡಾ.ಸಿ.ಎನ್.ರಾಮಚಂದ್ರ, ಡಾ.ಬೆಟಗೇರಿ ಕೃಷ್ಣಶರ್ಮ ಜಾನಪದ ಪ್ರಶಸ್ತಿಯನ್ನು ಡಾ. ಎನ್.ಆರ್. ನಾಯ್ಕ್ ಮತ್ತು ಡಾ.ಬೆಟಗೇರಿ ಕೃಷ್ಣಶರ್ಮ ಪತ್ರಕರ್ತ  ಪಶಸ್ತಿಯನ್ನು ಪದ್ಮರಾಜ ದಂಡಾವತಿ ಅವರಿಗೆ ನೀಡಲು ಡಾ.ಬೆಟಗೇರಿ ಕೃಷ್ಣಶರ್ಮ ಟ್ರಸ್ಟ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ  ತಿರ್ಮಾನಿಸಲಾಯಿತು.

ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಮತ್ತು ಫಲಕಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ  ಸಮಾರಂಭವನ್ನು ಎಫ್ರೀಲ್ ತಿಂಗಳಿನಲ್ಲಿ  ನಡೆಸಲಾಗುತ್ತದೆ.

ಪ್ರಶಸ್ತಿ ವಿಜೇತರಿಗೆ ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟಿನ ಅಧ್ಯಕ್ಷರಾದ ಪ್ರೊ. ರಾಘವೇಂದ್ರ ಪಾಟೀಲ, ಸದಸ್ಯ ಕಾರ್ಯದರ್ಶಿಗಳಾದ ವಿದ್ಯಾವತಿ ಭಜಂತ್ರಿ ಹಾಗೂ ಟ್ರಸ್ಟ್‍ನ ಎಲ್ಲ ಸದಸ್ಯರಾದ ಡಾ. ಸರಜೂ ಕಾಟ್ಕರ್, ಡಾ. ಅರವಿಂದ ಮಾಲಗತ್ತಿ, ಡಾ.ಸಿ.ಕೆ.ನಾವಲಗಿ, ಸತೀಶ ಕುಲಕರ್ಣಿ, ಪ್ರೊ. ಚಂದ್ರಶೇಖರ ವಸ್ತ್ರದ, ಡಾ. ಬಸವರಾಜ ಜಗಜಂಪಿ, ಆಶಾ ಕಡಪಟ್ಟಿ ಇವರೆಲ್ಲರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‍ನ ಅಧ್ಯಕ್ಷರಾದ ಪ್ರೊ.ರಾಘವೇಂದ್ರ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Leave a reply

Your email address will not be published. Required fields are marked *