Select Page

Advertisement

ಒಡೆದ ಮನೆ ಒಂದು ಮಾಡಿದ ರಾಜಾಹುಲಿ ; ಯಡಿಯೂರಪ್ಪ ಎಂಟ್ರಿಯಿಂದ ಕಂಗಾಲಾದ ಕಾಂಗ್ರೆಸ್

ಒಡೆದ ಮನೆ ಒಂದು ಮಾಡಿದ ರಾಜಾಹುಲಿ ; ಯಡಿಯೂರಪ್ಪ ಎಂಟ್ರಿಯಿಂದ ಕಂಗಾಲಾದ ಕಾಂಗ್ರೆಸ್

ಬೆಳಗಾವಿ : ಒಂದು ಮನೆ ಮೂರು ಬಾಗಿಲು ಎಂಬ ಪರಿಸ್ಥಿತಿಯಲ್ಲಿದ್ದ ಬೆಳಗಾವಿ ಬಿಜೆಪಿ ಮುಖಂಡರನ್ನು ಒಂದು ಮಾಡುವಲ್ಲಿ ರಾಜಾಹುಲಿ ಬಿ.ಎಸ್ ಯಡಿಯೂರಪ್ಪ ಬಹುತೇಕ ಯಶಸ್ವಿಯಾಗಿದ್ದಾರೆ. ಯಡಿಯೂರಪ್ಪ ವಿರೋಧ ಮಾಡಿದ್ದ ನಾಯಕರ ಜೊತೆ ಸಭೆ ಮಾಡಿದ್ದ ಕಾರಣ ಸಧ್ಯ ಕಾಂಗ್ರೆಸ್ ಪಾಳೆಯದಲದಲ್ಲಿ ನಡುಕ ಶುರುವಾಗಿದೆ.

ಮಂಗಳವಾರ ತಡರಾತ್ರಿ ಮಾಜಿ ಸಿಎಂ ಯಡಿಯೂರಪ್ಪ ಬೆಳಗಾವಿಗೆ ಬಂದಿದ್ದು ಜಿಲ್ಲೆಯ ಪ್ರಮುಖ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪ್ರಮುಖವಾಗಿ ಶಾಸಕ ಅಭಯ್ ಪಾಟೀಲ್, ಹಾಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಮಾಜಿ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಘೊಷಣೆಯಾಗುತ್ತಿದ್ದ ಹಾಗೆ ಬಿಜೆಪಿ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿತ್ತು. ಗೋ ಬ್ಯಾಕ್ ಜಗದೀಶ್ ಶೆಟ್ಟರ್ ಅಭಿಯಾನದ ಮೂಲಕ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬ ಕೂಗು ಜೋರಾಗಿತ್ತು. ಆದರೆ ಇದೆಲ್ಲವನ್ನು ಗಮನಿಸಿದ ರಾಜಾಹುಲಿ ಒಗ್ಗಟ್ಟಿನ ಮಂತ್ರ ಹೇಳುವ ಮೂಲಕ ಅಸಮಾಧಾನ ತನಿಸಿದ್ದಾರೆ‌.

ಒಟ್ಟಿನಲ್ಲಿ ಬೆಳಗಾವಿ ಲೋಕಸಭಾ ಚುನಾವಣಾ ಕಣ ರಂಗು ಪಡೆದಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ. ಸಧ್ಯ ಬಿಜೆಪಿ ವಲಯದಲ್ಲಿ ಶಕ್ತಿ ಹೆಚ್ಚಾಗಿದ್ದು ಚುನಾವಣೆ ಮುಗಿಯುವವರೆಗೂ ಇದೇ ಮುಂದುವರೆಯುತ್ತದೆಯಾ ಎಂಬುದನ್ನು ಕಾದು ನೋಡಬೇಕು‌.

Advertisement

Leave a reply

Your email address will not be published. Required fields are marked *

error: Content is protected !!