
ವಿದ್ಯುತ್ ಕಡಿತದಿಂದ ಬೇಸತ್ತು ಹೆಸ್ಕಾಂ ಕಚೇರಿಗೆ ಜೀವಂತ ಮೊಸಳೆ ತಂದುಬಿಟ್ಟ ಗ್ರಾಮಸ್ಥರು

ವಿಜಯಪುರ : ರಾತ್ರಿ ವೇಳೆಯಲ್ಲಿ ವಿದ್ಯುತ್ ನೀಡದಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಜೀವಂತ ಮೊಸಳೆ ತಂದು ಹೆಸ್ಕಾಂ ಕಚೇರಿ ಆವರಣದಲ್ಲಿ ಬಿಟ್ಟ ಘಟನೆ ವಿಜಯಪುರದ ರೋಣಿಹಾಳ ಗ್ರಾಮದಲ್ಲಿ ನಡೆದಿದೆ.
ಸರ್ಕಾರ ಪ್ರತಿದಿನ ವಿದ್ಯುತ್ ನೀಡುವಂತೆ ಆದೇಶ ನೀಡಿದರು, ರಾತ್ರಿ ವೇಳೆಯಲ್ಲಿ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಇದರಿಂದ ಜನ ಆಕ್ರೋಶಗೊಂಡಿದ್ದು, ಹೊಲದಲ್ಲಿ ಬಿದ್ದಿದ್ದ ಜೀವಂತ ಮೊಸಳೆಯನ್ನು ತಂದು ಕಚೇರಿಗೆ ಬಿಟ್ಟಿದ್ದಾರೆ.
ರೈತರ ನಡೆಗೆ ಕಕ್ಕಾಬಿಕ್ಕಿಯಾದ ಹೆಸ್ಕಾಂ ಸಿಬ್ಬಂದಿಗಳು ಕೆಲಹೊತ್ತು ಗಾಬರಿಗೊಂಡಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದು ರೈತರ ಮನವೊಲಿಸಿ ಮೊಸಳೆಯನ್ನು ತಗೆದುಕೊಂಡು ಹೋಗಿದ್ದಾರೆ.