Select Page

ಹುಬ್ಬಳ್ಳಿ – ಬೆಳಗಾವಿ – ಪುಣೆ ಮಧ್ಯೆ ಒಂದೇ ಭಾರತ ರೈಲು ಸಂಚಾರ ಆರಂಭ, ವೇಳಾಪಟ್ಟಿ ನೋಡಿ

ಹುಬ್ಬಳ್ಳಿ – ಬೆಳಗಾವಿ – ಪುಣೆ ಮಧ್ಯೆ ಒಂದೇ ಭಾರತ ರೈಲು ಸಂಚಾರ ಆರಂಭ, ವೇಳಾಪಟ್ಟಿ ನೋಡಿ

ಬೆಳಗಾವಿ: ಪುಣೆಯಿಂದ ಬೆಳಗಾವಿ ಮೂಲಕ ಹುಬ್ಬಳಿಯವರೆಗೆ ವಂದೇ ಭಾರತ್ ರೈಲು ಸಂಚಾರಕ್ಕೆ ಸೆಪ್ಟೆಂಬರ್ 16 ರಂದು ಅಹ್ಮದಾಬಾದ್‌ನಿಂದ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.

ಗುರುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಈರಣ್ಣ ಕಡಾಡಿ. ಸಪ್ಟೆಂಬರ್ 16 ರಂದು ಪುಣೆ-ಹುಬ್ಬಳ್ಳಿ ವಂದೇ ಭಾರತ್ ರೈಲು ಪುಣೆಯಿಂದ ಸಂಜೆ 4.15 ಕ್ಕೆ ಹೊರಟು ರಾತ್ರಿ 09 ಕ್ಕೆ ಬೆಳಗಾವಿಗೆ ಆಗಮಿಸಲಿದೆ.

ಈ ಸಂದರ್ಭದಲ್ಲಿ ಬೆಳಗಾವಿ ರೈಲು ನಿಲ್ದಾಣದಲ್ಲಿ ರಾತ್ರಿ 08 ಗಂಟೆಗೆ ಸಾಂಸ್ಕೃತಿಕ ಹಾಗೂ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ರೈಲು ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ವಂದೇ ಭಾರತ್ ರೈಲು ಪುಣೆಯಿಂದ-ಹುಬ್ಬಳ್ಳಿಗೆ 08 ಗಂಟೆ 30 ನಿಮಿಷದ ಅವಧಿಯಲ್ಲಿ ತಲುಪಲಿದೆ. ಸೆ. 16 ರಂದು ಪುಣೆಯಿಂದ ವಂದೇ ಭಾರತ್ ರೈಲು ಸಂಚರಿಸಲಿದೆ. ಹಾಗೆಯೇ ಸೆ. 18 ರಿಂದ ಹುಬ್ಬಳ್ಳಿಯಿಂದ ಸೇವೆ

ಆರಂಭವಾಗಲಿದ್ದು ವಾರದಲ್ಲಿ ಮೂರು ಬಾರಿ (ಬುಧವಾರ, ಶುಕ್ರವಾರ ಹಾಗೂ ರವಿವಾರ) ಮತ್ತು ಪುಣೆಯಿಂದ (ಗುರುವಾರ, ಶನಿವಾರ ಮತ್ತು ಸೋಮವಾರ) ರೈಲು ಸಂಚರಿಸಲಿದೆ.

ಪ್ರಯಾಣ ಕರ ಸ್ಪಂದನೆ ಮತ್ತು ಜನದಟ್ಟಣೆಯನ್ನು ಗಮನದಲ್ಲಿಟ್ಟು ಮುಂದೆ ಈ ರೈಲುನ್ನು ಪ್ರತಿದಿನ ಸಂಚರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು ಸಂಸದ ಈರಣ್ಣ ಕಡಾಡಿ‌ ಮಾಹಿತಿ ನೀಡಿದರು.

ರೈಲಿನ ಸಮಯ :

ರೈಲು ಸಂ. 20669 ಬೆಳಗ್ಗೆ 05ಕ್ಕೆ ಹುಬ್ಬಳಿ ನಿಲ್ದಾಣದಿಂದ ಹೊರಟು 5.15 ಧಾರವಾಡ, 6:55 ಬೆಳಗಾವಿ, 09:15ಕ್ಕೆ ಮೀರಜ್, 09:30 ಕ್ಕೆ ಸಾಂಗಲಿ, 10:35ಕ್ಕೆ ಸತಾರಾ ಹಾಗೂ 01:30ಕ್ಕೆ ಪುಣೆ ತಲುಪಲಿದೆ.

ರೈಲು ಸಂ. 20670 ಮಧ್ಯಾಹ್ನ 2:15ಕ್ಕೆ ಪುಣೆಯಿಂದ ಹೊರಟು ಸಂಜೆ 4:08 ಕ್ಕೆ ಸತಾರಾ, 06:10ಕ್ಕೆ ಸಾಂಗಲಿ, 06:40ಕ್ಕೆ ಮೀರಜ್, ರಾತ್ರಿ 08:35 ಕ್ಕೆ ಬೆಳಗಾವಿ, 10:30ಕ್ಕೆ ಧಾರವಾಡ ಹಾಗೂ 10:45 ಕ್ಕೆ ಹುಬ್ಬಳಿ ನಿಲ್ದಾಣಕ್ಕೆ ತಲುಪಲಿದೆ ಪ್ಎಕ್ಸ್ಪ್ರರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

Advertisement

Leave a reply

Your email address will not be published. Required fields are marked *

error: Content is protected !!