
ಕುಳಲಿ ಶ್ರೀ ನಂಜುಂಡ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

ಮುಧೋಳ : ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಶ್ರೀ ಭೀಮಾವಧೂತ ಮಠದ ನಂಜುಂಡ ಶಿವಾಚಾರ್ಯ ಸ್ವಾಮೀಜಿ ಸೋಮವಾರ ಲಿಂಗೈಕ್ಯರಾಗಿದ್ದಾರೆ.
ತೀವ್ರ ಅನಾರೋಗ್ಯ ಹಿನ್ನಲೆ ಶ್ರೀಗಳು ಮುಧೋಳ ನಗರದ ಶ್ರೀ ಸಾಯಿ ಆಧಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಪೂಜ್ಯರ ಆರೋಗ್ಯ ತೀವ್ರವಾಗಿ ಕೈ ಕೊಟ್ಟ ಹಿನ್ನಲೆಯಲ್ಲಿ ಸೋಮವಾರ ಲಿಂಗೈಕ್ಯ ರಾಗಿದ್ದಾರೆ. ನಂಜುಂಡ ಶಿವಾಚಾರ್ಯ ಸ್ವಾಮೀಜಿ ಧಾರ್ಮಿಕ ವಲಯದಲ್ಲಿ ಅತ್ಯಂತ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು.

ಶ್ರೀಗಳ ಅಗಲಿಕೆಯಿಂದ ಅವರ ಅಪಾರ ಭಕ್ತರು ಕಂಬನಿ ಮಿಡಿದಿದ್ದಾರೆ. ಆಗಸ್ಟ್ 9 ರಂದು ಮಂಗಳವಾರ ಪೂಜ್ಯರ ಮಹಾ ಸಮಾಧಿ ನಡೆಯಲಿದೆ.