ಅಂಗಡಿ ರೈಲಿಗೆ ಅಂಗಡಿ ಹೆಸರೇ ಶಿಫಾರಸ್ಸು: ಸಿಎಂ ಬೊಮ್ಮಾಯಿ
ಬೆಳಗಾವಿ : ಕೇಂದ್ರ ಸಚಿವ ದಿ. ಸುರೇಶ್ ಅಂಗಡಿ ಹೆಸರನ್ನು ಬೆಳಗಾವಿ – ಬೆಂಗಳೂರು ರೈಲಿಗೆ ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಅಂಗಡಿ ಶಿಕ್ಷಣ ಸಂಸ್ಥೆಯಲ್ಲಿ ದಿ. ಸುರೇಶ್ ಅಂಗಡಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು. ಸುರೇಶ್ ಅಂಗಡಿ ಕೊನೆಯವರೆಗೂ ಜನರ ಸೇವೆಗಾಗಿ ಶ್ರಮಿಸಿದವರು. ಅವರು ಸಚಿವರಾಗಿದ್ದ ಒಂದು ವರ್ಷ ಅವಧಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ
ಕಾರ್ಯಗಳು ನಡೆದಿದ್ದವು. ಈ ಹಿನ್ನಲೆಯಲ್ಲಿ ಬೆಳಗಾವಿ – ಬೆಂಗಳೂರು ರೈಲಿಗೆ ದಿ. ಸುರೇಶ್ ಅಂಗಡಿ ಹೆಸರು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದರು.
ಧಾರವಾಡ – ಬೆಳಗಾವಿ ರೈಲು ಯೋಜನೆಗೆ ಶೀಘ್ರವೇ ಹಣಕಾಸಿನ ಅನುಮೋದನೆ : ಕೇಂದ್ರ ರೈಲ್ವೆ ಇಲಾಖೆಯಿಂದ ಅನುಮೋದನೆ ಪಡೆದಿರುವ ಬೆಳಗಾವಿ – ಧಾರವಾಡ ರೈಲು ಯೋಜನೆಗೆ ಶೀಘ್ರವೇ ರಾಜ್ಯ ಸಕರ್ಸರದ ಹಣಕಾಸಿನ ಅನುಮೋದನೆ ನೀಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.