Select Page

Advertisement

ಪತ್ರಕರ್ತ ಮಂಜುನಾಥ ಪಾಟೀಲ್ ಸೇರಿ 14 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಪತ್ರಕರ್ತ ಮಂಜುನಾಥ ಪಾಟೀಲ್ ಸೇರಿ 14 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಳಗಾವಿ : ರಾಜ್‌ನ್ಯೂಸ್ ವರದಿಗಾರ ಮಂಜುನಾಥ ಪಾಟೀಲ್ ಸೇರಿ 14 ಜನರಿಗೆ‌ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು ನವೆಂಬರ್ 1 ರಂದು ಮಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಂದು ಪ್ರಶಸ್ತಿ ಪ್ರಧಾನ ನಡೆಯಲಿದೆ.

ಪತ್ರಕರ್ತರಾದ ಡೆಕ್ಕನ್ ಹೆರಾಲ್ಡ್ ನ ವರದಿಗಾರ ರಾಜು ಗವಳಿ, ದಿಗ್ವಿಜಯ ನ್ಯೂಸ್ ಕ್ಯಾಮೆರಾಮನ್ ರವಿರಾಜ್ ಮಬ್ರೂಂಕರ್, ಸಂದೇಶ ದ್ವೈವಾರದ ಸಂಪಾದಕರಾದ ಅರವಿಂದ ದೇಶಪಾಂಡೆ, ಚಿಕ್ಕೋಡಿಯ ವಿಜಯ ಕರ್ನಾಟಕ ವರದಿಗಾರ ವಿರುಪಾಕ್ಷ ಕವಟಗಿ, ಛಾಯಾಗ್ರಾಹಕ ಸದಾಶಿವ ಸಂಕಪ್ಪಗೋಳ ಹಾಗೂ ಚನ್ನಮ್ಮನ ಕಿತ್ತೂರಿನ ಪತ್ರಿಕಾ ವಿತರಕರಾದ ಮಹಾದೇವ ತುರಮರಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸನ್ಮಾನ ಆಯ್ಕೆ ಉಪ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವ್ಹಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೆಂಬರ್ 1 ರಂದು ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ 67 ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡನಾಡುನುಡಿಗಾಗಿ ಸೇವೆ ಸಲ್ಲಿಸಿರುವ ಕನ್ನಡಪರ ಹೋರಾಟಗಾರರು ಹಾಗೂ ಪತ್ರಕರ್ತರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ, ಗೌರವಿಸಲು ನಿರ್ಧರಿಸಲಾಗಿದೆ.

ಸನ್ಮಾನ ಆಯ್ಕೆ ಉಪ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವ್ಹಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಸನ್ಮಾನ ಆಯ್ಕೆ ಉಪ ಸಮಿತಿ ಸಭೆಯಲ್ಲಿ ಒಟ್ಟು ೧೪ ಜನರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ ಆರ್.ಕೆ.ಕುಲಕರ್ಣಿ, ಕನ್ನಡಪರ ಹೋರಾಟಗಾರರಾದ ಮಹಾದೇವ ತಳವಾರ, ದೀಪಕ್ ಗುಡಗನಟ್ಟಿ, ಬಂಕ್ಯಾಗೋಳ, ಅನಂತಕುಮಾರ್ ಬ್ಯಾಕೂಡ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿಲೀಪ್ ಕುರಂದವಾಡೆ, ಹಿರಿಯ ಪತ್ರಕರ್ತರಾದ ಕೇಶವ ಆದಿ, ಶ್ರೀಶೈಲ ಮಠದ, ಮೆಹಬೂಬ್ ಮಕಾನದಾರ, ಸಂಪತ್ ಮುಚಳಂಬಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಕನ್ನಡದ ಹಿರಿಯ ಹೋರಾಟಗಾರರಾದ ವಡಗಾವಿಯ ಶ್ರೀನಿವಾಸ ತಾಳೂಕರ; ಸವದತ್ತಿಯ ಶ್ರೀಧರ ಅಸಂಗಿಹಾಳ, ಬೈಲಹೊಂಗಲ ತಾಲ್ಲೂಕಿನ ದೊಡವಾಡದ ಮಲ್ಲಪ್ಪ ಯರಿಕಿತ್ತೂರ, ಬೆಳಗಾವಿಯ ಟಿ.ಶಾಂತಮ್ಮ, ಜಾಧವ ನಗರದ ವಿಜಯಕುಮಾರ ಶೆಟ್ಟಿ, ಟಿಳಕವಾಡಿಯ ಹಾಸೀಮ್ ಬಾವಿಕಟ್ಟಿ, ಚಿಕ್ಕೋಡಿಯ ಅಲ್ಲಮಪ್ರಭು ಚಿಂಚಣಿ ಮಠ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.

Advertisement

Leave a reply

Your email address will not be published. Required fields are marked *