
ಎಸ್ಪಿ ಫೋನ್ ಇನ್ ಫಲಶೃತಿ – ಬದಿಗೆ ಸರಿದ ವಾಹನಗಳು

ಬೆಳಗಾವಿ : ಕಿತ್ತೂರು – ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಾಲಾಗಿ ನಿಲ್ಲುತ್ತಿದ್ದ ಟ್ರಕ್ ಹಾಗೂ ಭಾರಿ ಗಾತ್ರದ ವಾಹನಗಳಿಂದ ಸಂಚಾರಕ್ಕೆ ಸಮಸ್ಯೆ ಆಗುತ್ತಿದ್ದು ಪರಿಹಾರ ನೀಡುವಂತೆ ಶುಕ್ರವಾರ ಎಸ್ಪಿ ಡಾ. ಸಂಜೀವ್ ಪಾಟೀಲ್ ನಡೆಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮನವಿ ಮಾಡಿದ್ದರು.
ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಎಸ್ಪಿ. ಕಿತ್ತೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ದಾಬಾಗಳ ಮುಂದೆ ಭಾರಿ ಗಾತ್ರದ ಟ್ರಕ್ ನಿಲುಗಡೆಗೆ ಕಡಿವಾಣ ಹಾಕಿದ್ದರು. ಸಧ್ಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಾಹನ ನಿಲುಗಡೆ ಇಲ್ಲದಿರುವುದರಿಂದ ಸಾರ್ವಜನಿಕರು ಸರಾಗವಾಗಿ ಸಂಚಾರ ಮಾಡುವಂತಾಗಿದೆ.

ಮೊನ್ನೆಯಷ್ಟೆ ಧಾರವಾಡ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಐವರು ಬಲಿಯಾಗಿದ್ದರು. ಸಧ್ಯ ಎಸ್ಪಿ ಅವರ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.