
“ರಂಗೋಲಿಯಲ್ಲಿ ಅರಳಿದ ಸಿಂಧುತಾಯಿ”

ಬೆಳಗಾವಿ : ಮಹಾರಾಷ್ಟ್ರದ ಸಾವಿರಾರು ಅನಾಥ ಮಕ್ಕಳ ಪಾಲಿನ ಮಹಾತಾಯಿ ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸುವ ಮೂಲಕ ಕಲಾವಿದರೊಬ್ಬರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಗರದ ವಡಗಾಂವ ನಿವಾಸಿ ರಂಗೋಲಿ ಕಲಾವಿದ ಅಜಿತ್ ಔರ್ವಾಡಕರ್ ಎಂಬುವವ ಅವರು ಸಮಾಜ ಸೇವಕಿ, ಅನಾಥ ಮಕ್ಕಳ ತಾಯಿ ಪದ್ಮಶ್ರೀ ಸಿಂಧುತಾಯಿ ಸಪ್ಕಾಲ್ ಅವರಿಗೆ ರಂಗೋಲಿಯಲ್ಲಿ ಅವರ ಚಿತ್ರಬಿಡಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ರಂಗೋಲಿಯಲ್ಲಿ ಸಿಂಧುತಾಯಿ ಭಾವಚಿತ್ರ ಬಿಡಿಸಲು ಇವರು 7ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ.
ಮಹಾರಾಷ್ಟ್ರ ಮೂಲದ ಸಾವಿರಾರು ಅನಾಥ ಮಕ್ಕಳ ಪಾಲಿನ ಮಹಾತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರು ವಯೋಸಹಜ ಕಾಯಿಲೆಯಿಂದ ಪುಣೆಯ ಗ್ಯಾಲಾಕ್ಸಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದರು. ಸಿಂಧುತಾಯಿ ಸಪ್ಕಾಲ್ ಅವರು ಅನಾಥ ಮಕ್ಕಳಿಗಾಗಿ ಸ್ವಂತ ಸಂಸ್ಥೆಯನ್ನೇ ಪ್ರಾರಂಭಿಸಿದ್ದರು. ತಂದೆ ತಾಯಿ ಇಲ್ಲದ ಮಕ್ಕಳಿಗೆ ತಾಯಿಯ ಬೆಚ್ಚಗಿನ ನೆರಳಾಗಿ, ಅಪ್ಪನ ಆಸರೆಯಾಗಿ ಸಾವಿರಾರು ಅನಾಥ ಮಕ್ಕಳಿಗೆ ಹೆತ್ತವ್ವಳಾಗಿದ್ದಳು.ಈ ಮಹಾತಾಯಿಯ ಅದ್ಬುತ ಸಾಧನೆಗೆ ಇಡೀ ಜಗತ್ತೇ ತಲೆಬಾಗಿದ್ದಲ್ಲದೇ ಗೌರವ ಡಾಕ್ಟರೇಟ್ ಪದವಿ, ಪದ್ಮಶ್ರೀ ಸೇರಿದಂತೆ ಒಟ್ಟು 700ಕ್ಕೂ ಅಧಿಕ ಪ್ರಶಸ್ತಿಗಳು ಇವರನ್ನು ಹುಡಿಕೊಂಡು ಬಂದಿವೆ.