ಭೀಕರ ರಸ್ತೆ ಅಪಘಾತ ಸಿಪಿಐ ರವಿ ದಂಪತಿ ಸಾವು
ವಿಜಯಪುರ : ಸಿಂದಗಿ ಇಂದ ಕಲಬುರ್ಗಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಸಿಂದಗಿ ಪೊಲೀಸ್ ಠಾಣೆ ಸಿಪಿಐ ರವಿ ಉಕ್ಕುಂದ ಹಾಗೂ ಅವರ ಪತ್ನಿ ಮಧು ಉಕ್ಕುಂದ ಸಾವನಪ್ಪಿದ್ದಾರೆ.
ಜೇವರ್ಗಿ ತಾಲ್ಲೂಕಿನ ನೆಲೋಗಿ ಕ್ರಾಸ್‌ನಲ್ಲಿ ರಸ್ತೆ ಬದಿ ನಿಂತಿದ್ದ ಕಂಟೈನರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಇಬ್ಬರೂ ಸಾವಿಗೀಡಾಗಿದ್ದಾರೆ.
ಮೂಲತಃ ರವಿ ಉಕ್ಕುಂದ ಕೊಪ್ಪಳ ಜಿಲ್ಲೆಯವರು. ಇವರು ವಿಜಯಪುರ ಜಿಲ್ಲೆ ಸಿಂಧಗಿ ಠಾಣೆಯಲ್ಲಿ ಸಿಪಿಐ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಲಬುರಗಿಯ ಆಸ್ಪತ್ರೆಗೆಂದು ಸಿಂಧಗಿಯಿಂದ ಪತ್ನಿ ಜತೆಗೆ ಸ್ವಂತ ಕಾರಿನಲ್ಲಿ ತೆರಳುವಾಗ ಮಾರ್ಗಮಧ್ಯೆ ಅಪಘಾತ ಸಂಭವಿಸಿದೆ.