ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾರು ಭೀಕರ ಅಪಘಾತ..!
ಹಾರೂಗೇರಿ : ಮಾಜಿ ಡಿಸಿಎಂ ಹಾಗೂ ಪರಿಷತ್ ಸದಸ್ಯ ಲಕ್ಮಣ ಸವದಿ ಸಂಚರಿಸುತ್ತಿದ್ದ ಕಾರು ಅಪಘಾತವಾಗಿದೆ.
ಅಥಣಿ ಇಂದ ಗೋಕಾಕ್ ಮಾರ್ಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಹಾರೂಗೇರಿ ಏಕಲವ್ಯ ಕಾಲೇಜು ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಈ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಕಾರಿನಲ್ಲಿ ಇದ್ದರು. ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಹಾನಿಹಾಗಿಲ್ಲ.