Select Page

ಸಿದ್ದಗಂಗಾ ಶ್ರೀ ಪುತ್ಥಳಿ ವಿರೂಪ ಘಟನೆಗೆ ಟ್ವಿಸ್ಟ್ ; ಏಸು ದೇವ ಕೃತ್ಯ ಎಸಗುವಂತೆ ಹೇಳಿದ್ದ ಎಂದ ಆರೋಪಿ

ಸಿದ್ದಗಂಗಾ ಶ್ರೀ ಪುತ್ಥಳಿ ವಿರೂಪ ಘಟನೆಗೆ ಟ್ವಿಸ್ಟ್ ; ಏಸು ದೇವ ಕೃತ್ಯ ಎಸಗುವಂತೆ ಹೇಳಿದ್ದ ಎಂದ ಆರೋಪಿ

ಬೆಂಗಳೂರು : ನಡೆದಾಡುವ ದೇವರು ಎಂದೇ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಶ್ರೀಗಳ ಪುತ್ಥಳಿ ವಿರೂಪಗೊಳಿಸಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಕೇಸ್ ಸಂಬಂಧ ಬಂಧನವಾಗಿರೋ ರಾಜ್ ಶಿವು ಎಂಬಾತ ತನಗೆ ಕನಸಲ್ಲಿ ಏಸು ದೇವ ಬಂದ ಕೃತ್ಯ ಎಸಗುವಂತೆ ಹೇಳಿದ ಎನ್ನುವುದರ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾನೆ.

ಕೇಸ್ ಸಂಬಂಧ ರಾಜ್ ಶಿವು ಎಂಬಾತನನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಗಿರಿನಗರದ ಬಳಿಯ ವೀರಭದ್ರನಗರ ಬಸ್ ನಿಲ್ದಾಣದ ಬಳಿ ಕಳೆದ ಶನಿವಾರ ರಾತ್ರಿ ಪುತ್ಥಳಿಗೆ ಹಾನಿ ಮಾಡಿದ್ದನು. ಶಿವಕುಮಾರ್ ಸ್ವಾಮೀಜಿ ಮೂರ್ತಿ ಒಡೆಯಲು ಕನಸನಲ್ಲಿ ಬಂದು ಏಸು ಹೇಳಿದ್ದರಂತೆ. ಏಸು ಹೇಳಿದ್ದಕ್ಕೆ ಶಿವಕುಮಾರ್ ಸ್ವಾಮೀಜಿ ಮೂರ್ತಿ ವಿರೂಪಗೊಳಿಸಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

7 ವರ್ಷಗಳ ಹಿಂದೆ ರಾಜ್‌ ಶಿವು ಹಿಂದೂ ಧರ್ಮ ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದನು. ಹಿಂದೂ ದೇವತೆಗಳು, ಹಿಂದೂ ಧರ್ಮದ ಸಂತರು, ಸನ್ಯಾಸಿಗಳ ಮೇಲೆ ದ್ವೇಷ ಸಾಧಿಸುತ್ತಿದ್ದ. ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ವಾಸವಿದ್ದನು. ಕ್ರಿಶ್ಚಿಯನ್‌ಗೆ ಮತಾಂತರವಾದ ಮೇಲೆ ಧರ್ಮಾಂದನಂತೆ ವರ್ತಿಸುತ್ತಿದ್ದನು.

ಹೀಗಾಗಿ, ಶಿವಕುಮಾರ ಸ್ವಾಮೀಜಿ ಮೂರ್ತಿಯನ್ನು ಒಡೆಯಲು ಪ್ಲಾನ್ ಮಾಡಿಕೊಂಡಿದ್ದ ಶನಿವಾರ ರಾತ್ರಿ ಸುತ್ತಿಗೆ ಸಮೇತ ಆರೋಪಿ ಬಂದು, ರಾತ್ರಿ ಯಾರು ಇಲ್ಲದ ವೇಳೆ ಪುತ್ಥಳಿ ವಿರೂಪಗೊಳಿಸಿ ಎಸ್ಕೇಪ್ ಆಗಿದ್ದನು ಎಂದು ಗೊತ್ತಾಗಿದೆ.

ರಾಜ್ ಶಿವು ಕ್ರೈಸ್ತ ಧರ್ಮದ ಪ್ರಚಾರ ಮಾಡಲು ಭಿತ್ತಿಪತ್ರ ಹಂಚುತ್ತಿದ್ದ. ಪತ್ರದಲ್ಲಿನ ಕೋಡ್ ಸ್ಕ್ಯಾನ್ ಮಾಡಿದ್ರೆ ಬೈಬಲ್ ಸಿಗುವಂತೆ ಭಿತ್ತಿಪತ್ರ ಹಂಚುತ್ತಿದ್ದ ಎಂಬುದು ಕೂಡ ವಿಚಾರಣೆ ವೇಳೆ ಬಹಿರಂಗಗೊಂಡಿದೆ.

Advertisement

Leave a reply

Your email address will not be published. Required fields are marked *

error: Content is protected !!