ಭಾರತೀಯ ಸೇನೆ ಸೇರಿದ 651 ಅಗ್ನಿವೀರರು ; ಬೆಳಗಾವಿ ನೆಲದಲ್ಲಿ ಉನ್ನತ ತರಬೇತಿ
ಬೆಳಗಾವಿ : ಭಾರತೀಯ ಸೇನೆ ಹಾಗೂ ಬೆಳಗಾವಿಗೆ ಅವಿನಾಭಾವ ಸಂಬಂಧ. ಸೇನೆಗೆ ಸೇರುವ ವೀರ ಯೋಧರಿಗೆ ಅತ್ಯುನ್ನತ ತರಬೇತಿ ನೀಡುತ್ತಿರುವುದು ಇದೇ ಬೆಳಗಾವಿ ನೆಲದಲ್ಲಿ.
ಬೆಳಗಾವಿಯಲ್ಲಿರುವ ಮರಾಠ ಲಘು ಪದಾತಿದಳ ( ಎಂಎಲ್ಐಆರ್ ಸಿ ) ಕೇಂದ್ರ ಸ್ಥಾನದಿಂದ 31 ವಾರಗಳ ಕಾಲ ಕಠಿಣ ಪರಿಶ್ರಮದಿಂದ ತರಬೇತಿ ಪಡೆದ 651 ಅಗ್ನಿವೀರರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಸೇರ್ಪಡೆಯಾದರು.
ಎಂಎಲ್ಐಆರ್ ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜೋಯ್ ದೀಪ್ ಮುಖರ್ಜಿ ಅವರು ಸಮ್ಮುಖದಲ್ಲಿ ತರಬೇತಿ ಪಡೆದ ಅಗ್ನಿವೀರರು ಆಕರ್ಷಕ ನಿರ್ಗಮನ ಪಥಸಂಚಲನ ನಡೆಯಿತು. ಶಿಸ್ತುಬದ್ಧವಾಗಿ ನಡೆದ ಈ ಪಥಸಂಚಲನದಲ್ಲಿ ಯುವ ಸೈನಿಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅಗ್ನಿವೀರ ಸಾಹಿಲ್ ಶಿಂಧೆ ವಿಕ್ಟೋರಿಯಾ ಕ್ರಾಸ್ ಪದಕ ಪಡೆಕುಕೊಂಡರು. ತರಬೇತಿಯಲ್ಲಿ ಉತ್ನತ ಶ್ರೇಣಿ ಪಡೆದವರಿಗೆ ಈ ಪದಕ ನೀಡಲಾಗುತ್ತದೆ. ಇನ್ನುಳಿದಂತೆ ಅಗ್ನಿವೀರರ ಪೋಷಕರು ತಮ್ಮ ಮಕ್ಕಳ ಸಾಧನೆ ನೋಡಿ ಹೆಮ್ಮೆಪಟ್ಟುಕೊಂಡರು.