Video-ಅಶ್ಲೀಲ ವೀಡಿಯೋ ವದಂತಿಗೆ ನೋ ಕಾಮೆಂಟ್ ಎಂದ ಕೂಡಲಸಂಗಮ ಶ್ರೀ
ಬೆಳಗಾವಿ : ಪಂಚಮಸಾಲಿ ಹೋರಾಟದ ಮಂಚೂಣಿಯಲ್ಲಿರುವ ಕೂಡಲಸಂಗಮ ಪೀಠದ ಮೊದಲ ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯ ಅಶ್ಲೀಲ ವಿಡಿಯೋ ವದಂತಿಯ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನೋ ಕಮೆಂಟ್ ಎಂದು ಉತ್ತರ ನೀಡಿದ್ದಾರೆ.
ಮಂಗಳವಾರ ನಗರದ ಗಾಂಧಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಮ್ಮ ಸಮುದಾಯದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ನಾಯಕರಲ್ಲ. ಕೇವಲ ಶಾಸಕರು ಎಂದು ಹೇಳಿಕೆ ನೀಡಿರುವ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೆಲ ದಿನಗಳಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕುರಿತಾದ ಅಶ್ಲೀಲ್ ವಿಡಿಯೋ ಕುರಿತ ವದಂತಿ ದಟ್ಟವಾಗಿ ಹಬ್ಬಿತ್ತು. ಈ ಕುರಿತು ಸುದ್ದಿಗಾರರು ಸ್ವಾಮೀಜಿಗೆ ನಿಮ್ಮದ್ದು ಅಶ್ಲೀಲ್ ವಿಡಿಯೋ ಇದೆ ನಿಜಾನಾ ಎಂಬ ಪ್ರಶ್ನೆಗೆ ಸ್ವಾಮೀಜಿ ನೋ ಕಮೆಂಟ್ ಎಂದು ಹೇಳಿ ನಡೆದರು.