ವಿದ್ಯುತ್ ತಂತಿ ತಗುಲಿ ಲೈನಮನ್ ಸಾವು
ಗೋಕಾಕ್ : ವಿದ್ಯುತ್ ಟಿಸಿ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಕರೆಂಟ್ ತಂತಿ ತಗುಲಿ ಲೈನ್ ಮನ್ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೂಡಲಗಿ ಪಟ್ಟಣದ ಕೊಳವಿ ತೋಟದಲ್ಲಿ ಅವಘಡ ಸಂಭವಿಸಿದ್ದು ವಿದ್ಯುತ್ ತಂತಿ ತಗುಲಿ ಮಂಜುನಾಥ ಮಲ್ಲಪ್ಪ ಗಾಣಿಗೇರ 21 ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೆಇಬಿ ಗೆ ಮಾಹಿತಿ ನೀಡದೆ ಟಿಸಿ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ಬಂದ ಪರಿಣಾಮ ಶಾಕ್ ತಗುಲಿ ಮೃತಪಟ್ಟಿದ್ದಾನೆ.