ರಾಹುಲ್ ಗಾಂಧಿ ಮದುವೆಯಾಗಲು ನಾನು ರೆಡಿ ; ಕಂಡೀಷನ್ Apply ಎಂದ ನಟಿ
ಬೆಂಗಳೂರು : ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಮದುವೆ ಕುರಿತು ಅನೇಕ ಕಡೆಗಳಲ್ಲಿ ಗುಸು ಗುಸು ಚರ್ಚೆ ನಡೆಯುತ್ತಿವೆ. ಈ ಮಧ್ಯೆ ಮಾದಕ ನಟಿ ಒಬ್ಬಳು ರಾಹುಲ್ ಗಾಂಧಿ ಮದುವೆಯಾಗಲು ಮುಂದೆ ಬಂದಿದ್ದು ಕಂಡೀಷನ್ ಅಪ್ಲೈ ಎಂದಿದ್ದಾರೆ.
ಮಾದಕ ನಟಿ ತನ್ನ ಲುಕ್ ನಿಂದಲೇ ಖ್ಯಾತಿ ಹೊಂದಿರುವ ಮಾಡೆಲ್ ಶೆರ್ಲಿನ್ ಚೌಪ್ರಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮದುವೆ ವಿಷಯದಲ್ಲಿ ಸುದ್ದಿಯಾಗಿದ್ದಾರೆ. ರಾಹುಲ್ ಗಾಂಧಿ ಮದುವೆ ಆಗುತ್ತಿರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ವಿಭಿನ್ನ ಉತ್ತರ ನೀಡಿದ್ದಾಳೆ.
ಮುಂಬೈ ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುತ್ತಾ ರಾಹುಲ್ ಗಾಂಧಿ ಮದುವೆ ಕುರಿತು ಪ್ರಸ್ತಾಪಿಸಿದ ನಟಿ. ಅವರನ್ನು ಮದುವೆಯಾಗಲು ಯಾವುದೇ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ. ಈ ನಡುವೆ ಬಿಜೆಪಿ ವಿರೋಧಿ ಪಕ್ಷಗಳ ಸಭೆಯಲ್ಲಿಯೂ ರಾಹುಲ್ ಗಾಂಧಿ ಮದುವೆ ಕುರಿತು ಕೆಲವರು ಸೋನಿಯಾ ಗಾಂಧಿ ಜೊತೆ ಮಾತನಾಡಿದ್ದರು.
ಸಧ್ಯ ನಟಿ ಹಾಗೂ ಮಾಡೆಲ್ ನೀಡಿರುವ ಹೆಳಿಕೆ ಪ್ರಕಾರ ನಾನು ರಾಹುಲ್ ಗಾಂಧಿಯನ್ನು ಮದುವೆಯಾಗುತ್ತೇನೆ. ಆದರೆ ಅವರ ಅಡ್ಡಹೆಸರು ಗಾಂಧಿ ನನಗೆ ಬೇಡ. ನಾನು ಚೌಪ್ರಾ ಎಂಬುದನ್ನು ಬದಲಾವಣೆ ಮಾಡಿಕೊಳ್ಳಲ್ಲ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.
ಅನೇಕ ಸಂದರ್ಭಗಳಲ್ಲಿ ತನ್ನ ನೇರ ಹೇಳಿಕೆ ಮೂಲಕ ಸುದ್ದಿಯಾಗುವ ನಟಿ ಶೆರ್ಲಿನ್ ಚೌಪ್ರಾ ಯಾವುದಕ್ಕೂ ಸಂಕೋಚ ಒಡುವವಳಲ್ಲ. ಈ ಹಿಂದೆ ಮುಂಬೈ ಪೊಲೀಸ್ ಠಾಣೆಯಲ್ಲಿ ಕಿರುಕುಳ ಆರೋಪದ ಮೇಲೆ ಪ್ರಕರಣವನ್ನು ದಾಕಲಿಸಿದ್ದರು.


