Select Page

ಕೆಲಸ ಕೇಳಲು ಬಂದ ವ್ಯಕ್ತಿ ಹೊಟೇಲ್ ಮುಂಬಾಗ ಸಾವು

ಕೆಲಸ ಕೇಳಲು ಬಂದ ವ್ಯಕ್ತಿ ಹೊಟೇಲ್ ಮುಂಬಾಗ ಸಾವು

ಬೈಲಹೊಂಗಲ- ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಪ್ರಿಯಾ ಪ್ಯಾಲೇಸ್ ಹೊಟೇಲ ನಲ್ಲಿ ಕೆಲಸ ಕೇಳಲು ಬಂದ ಕೋಲ್ಕೋತ್ತಾ ಮೂಲದ ವ್ಯಕ್ತಿ ಅದೇ ದಿನವೇ ಹೊಟೆಲ್ ಮುಂಭಾಗದಲ್ಲಿ ದಿಢೀರನೆ ಕುಸಿದು ಬಿದ್ದು ಸಾವನ್ನಪಿದ್ದಾನೆ.

ಘಟನೆ ಶುಕ್ರವಾರ ಸಂಜೆ ನಡೆದಿದೆೆ. ಮೃತ ವ್ಯಕ್ತಿ ಕೋಲ್ಕೊತ್ತಾ ಮೂಲದ ರಾಜು ಶಂಕರ ಬೋಸ್ (೪೦) ಎನ್ನಲಾಗಿದೆ.

ಹೊಟೆಲ್ ಮಾಲೀಕ ನವೀನ ಶೆಟ್ಟಿಯವರು ದೊಡವಾಡ ಪೋಲೀಸ್ ಠಾಣೆಗೆ ದೂರು ನೀಡಿದ್ದು ಆತ ನಮ್ಮ ಬಳಿ ಬಂದು ಮಾತನಾಡಿ ನನಗೆ ಕೆಲಸ ಕೊಡಿ ಹೊಟೆಲಿನಲ್ಲಿ ದುಡಿಯುತ್ತೇನೆ ನನಗೆ ಅಸ್ತಮಾ ಖಾಯಿಲೆ ಇದ್ದು ಚಿಕಿತ್ಸೆಗಾಗಿ ದುಡ್ಡು ಬೇಕು ಎಂದು ಹೇಳಿ ಜೋರಾಗಿ ಕೆಮ್ಮುತ್ತಾ ಹೊಟೇಲ ಮುಂಭಾಗ ಕುಸಿದು ಬಿದ್ದಿದ್ದರಿಂದ.

ಕೂಡಲೇ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಆತ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.  ದೊಡವಾಡ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!