ಶ್ರೀಮಠದ ಪರಂಪರೆಗೆ ಧಕ್ಕೆ ತಂದರಾ ಮುರುಘಾ ಶ್ರೀ : ಕಳಂಕ ಹೊತ್ತರು ಪೀಠ ಬಿಡಲು ನಕಾರ….!
ಬೆಂಗಳೂರು : ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಜೈಲು ಪಾಲಾಗಿರುವ ಚಿತ್ರದುರ್ಗ ಮುರುಘಾ ಶರಣರ ಸಧ್ಯ ಮತ್ತೊಂದು ಸಂಕಷ್ಟ ಎದುರಾಗಿದ್ದು, ಐತಿಹಾಸಿಕ ಹಿನ್ನಲೆಯಿರುವ ಮಠಕ್ಕೆ ಹೊಸ ಪೀಠಾಧಿಪತಿ ಬರುವ ಲಕ್ಷಣಗಳು ಗೋಚರಿಸುತ್ತಿವೆ.
ಹೌದು ಈಗಾಗಲೇ ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲು ಪಾಲಾಗಿರುವ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮತ್ತಿಬ್ಬರು ಯುವತಿಯರಿಗೆ ಶ್ರೀಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಮುಂದುವರಿದ ಭಾಗ ಪ್ರಾರಂಭವಾಗಬೇಕಿದೆ.
ಹೀಗೆ ಒಂದಿಲ್ಲೊಂದು ಸುಳಿಯಲ್ಲಿ ಸಿಲುಕಿದ ಮುರುಘಾ ಶರಣರು ಸಧ್ಯಕ್ಕೆ ಜೈಲಿನಿಂದ ಹೊರಬರುವ ಲಕ್ಷಣ ಗೋಚರಿಸುತ್ತಿಲ್ಲ. ಜೊತೆಗೆ ಐತಿಹಾಸಿಕ ಹಿನ್ನಲೆ ಹೊಂದಿದ ಮಠಕ್ಕೆ ಕಳಂಕಿತ ಸ್ವಾಮೀಜಿ ಬೇಕೆ..? ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿದ್ದು ನೂತನ ಪೀಠಾಧಿಪತಿ ಆಯ್ಕೆಗೆ ಸದ್ದಿಲ್ಲದೆ ತಯಾರಿ ನಡೆಯುತ್ತಿದೆ ಎಂಬ ಮಾತು ಕೇಳಿವರುತ್ತಿದೆ.
ಮಠದ ಪರಂಪರೆ ಹಾಳು ಮಾಡಿದ್ರಾ ಮುರುಘಾ ಶ್ರೀ : ಅದೆಷ್ಟೋ ವರ್ಷಗಳ ಪರಂಪರೆ ಹೊಂದಿರುವ ಚಿತ್ರದುರ್ಗದ ಮುರುಘಾ ಮಠಕ್ಕೆ ಈಗಿನ ಸ್ವಾಮೀಜಿ ಮುರುಘಾ ಶರಣರು ಕಳಂಕ ತಂದರಾ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಜೊತೆಗೆ ಕಳಂಕ ಹೊತ್ತುಕೊಂಡು ಇಂತಹ ಪೀಠದಲ್ಲಿ ಉಳಿಯುವ ಭಂಡತನ ತೋರಿಸುವುದು ಎಷ್ಟು ಸರಿ ಎಂಬುದು ಭಕ್ತರ ವಾದವಾಗಿದೆ.