ಈಜಲು ಬಾರದೆ ಕಾಲುವೆಯಲ್ಲಿ ಮುಳುಗಿ ಯುವಕ ಸಾವು
ಸವದತ್ತಿ : ತಾಲೂಕಿನ ಉಗರಗೋಳ ಗ್ರಾಮದ ಹೊರವಲಯದ ಮಲಪ್ರಭಾ ಬಲದಂಡೆ ಕಾಲುವೆಗೆ ಸ್ನಾನಕ್ಕೆ ತೆರಳಿದ್ದ ಯುವಕ ಈಜು ಬಾರದೆ ನೀರಲ್ಲಿ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ.
ವಿನಾಯಕ ಹನುಮಂತ ಬಿರಾಜವರ್ (22) ಯುವಕ ಸ್ನಾನಕ್ಕೆ ಕಾಲುವೆಗೆ ತೆರಳಿದ್ದ. ಈ ಸಂದರ್ಭದಲ್ಲಿ ಈಜು ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಮೃತದೇಹ ಹೊರಕ್ಕೆ ತಗೆದಿದ್ದಾರೆ.