ಇನ್ಮುಂದೆ ಮಾತಾಡಲ್ಲ ಕೈ ಮುಗಿಯುತ್ತೇನೆ ವಿಷಯ ಬಿಟ್ಟುಬಿಡಿ ಎಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ : ಹಿಂದೂ ಪದದ ಅರ್ಥ ಅಶ್ಲೀಲ ವಿಚಾರವಾಗಿ ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿಷಾದ ವ್ಯಕ್ತಪಡಿಸಿ ಮಾತು ಹಿಂಪಡೆದಿದ್ದು ಇನ್ಮುಂದೆ ಈ ಈ ವಿಷಯದ ಕುರಿತು ಮಾತನಾಡಲ್ಲ, ಕೈ ಮುಗಿಯುತ್ತೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ಬಿಜೆಪಿ ಹೋರಾಟದ ಕುರಿತು ತಮ್ಮ ಅಭಿಪ್ರಾಯ ವೆಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಇವರು. ಈ ಕುರಿತಾಗಿ ನಮ್ಮ ಪಕ್ಷದ ಮುಖಂಡರಾದ ಸತೀಶ್ ಜಾರಕಿಹೊಳಿ ತಮ್ಮ ಮಾತನ್ನು ವಾಪಸ್ ಪಡೆದಿದ್ದಾರೆ. ಯಾರೆಲ್ಲ ಭಾವನೆಗೆ ದಕ್ಕೆ ಆಗಿದೆ ಎಂಬುದರ ಕುರಿತು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದು ಇನ್ಮುಂದೆ ಈ ವಿಷಯದ ಕುರಿತು ನಾವು ಮಾತನಾಡಲ್ಲ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಮಾಡಿರುವ ಸಾಮಾಜಿಕ ಕಾರ್ಯಗಳ ಕುರಿತು ನಮ್ ಪಕ್ಷ ಹಾಗೂ ಬೆಳಗಾವಿ ಜಿಲ್ಲೆಯ ಜನರಿಗೆ ಗೊತ್ತು. ಈ ಕುರಿತು ಎರಡು ಮಾತಿಲ್ಲ. ಜೊತೆಗೆ ಅವರ ಹೇಳಿಕೆ ಕುರಿತಾಗಿ ವಿಷಯ ಮುಂದುವರಿಸುವುದು ಬೇಡ ಕೈ ಮುಗಿದು ಕೇಳಿಕೊಳ್ಳುವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.