ಹೆಂಡ್ತಿ, ಮಕ್ಕಳ ಮಾತೇ ಕೇಳಲ್ಲ ; ಕುಡಚಿ ಶಾಸಕರ ವಿರುದ್ಧ ಸಚಿವ ಸತೀಶ್ ವಾಗ್ದಾಳಿ
ಹಾರೂಗೇರಿ : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ವಿರುದ್ಧ ಸ್ವ ಪಕ್ಷದರೇ ಕೆಲಸ ಮಾಡಿದ್ದರು, ನಾನು ಮಾಜಿ ಶಾಸಕ ಶಾಮ್ ಘಾಟಗೆ ಮಾತು ಕೇಳುತ್ತೇನೆ ಎಂದು ಆರೋಪ ಮಾಡುತ್ತಾರೆ ಘಾಟಗೆ ಅಷ್ಟೇ ಅಲ್ಲ ಮನೆಯಲ್ಲಿ ನಾನು ನನ್ನ ಹೆಂಡತಿ, ಮಕ್ಕಳ ಮಾತೂ ಕೇಳಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ವಿರುದ್ಧ ವಾಗ್ದಾಳಿ ನಡೆಸಿದರು.
ಹಾರೂಗೇರಿ ಪಟ್ಟಣದಲ್ಲಿ ನೂತನ ಸಂಸದರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಇವರು. 23 ಸಾವಿರ ಲೀಡ್ ಕೊಟ್ಟಿದ್ದೇನೆ ಎಂದಿದ್ದ ಮಹೇಂದ್ರ ತಮ್ಮಣ್ಣವರರಿಗೆ ಕುಡಚಿ ಒಂದೇ ಊರಲ್ಲಿ 18 ಸಾವಿರ ಮತಗಳು ಬಂದಿವೆ. ಇನ್ನು ನಾಲ್ಕು ಸಾವಿರ ಮತಗಳು ಮಾತ್ರ ಉಳಿದವು. ಕಳೆದ ಬಾರಿ ನಿಮಗೆ ಬಿದ್ದ ಮತಗಳು ಕೂಡ ಬಿಜೆಪಿಗೆ ಹೋಗಿವೆ ಎಂದರು.
ಈ ಕುರಿತು ಸುಮ್ಮನೆ ಆರೋಪ ಮಾಡಲು ನಾನು ಖಾಲಿ ಇಲ್ಲ. ಯಾರು ಕೆಲಸ ಮಾಡಿಲ್ಲ ಅವರ ವಿರುದ್ಧ ಆರೋಪ ಮಾಡಿದ್ದೇನೆ. ಎಲ್ಲಾ ಕಡೆ ಮೋಸ ಆಗಿದ್ದರೆ ನಾವು ಗೆಲ್ಲುವುದು ಕಠಿಣ ಆಗುತ್ತಿತ್ತು. ರಾಜಕೀಯದಲ್ಲಿ ಹೊಂದಾಣಿಕೆ ಇರಬೇಕು, ತಪ್ಪಾಯ್ತು ಎಂದು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದು ಒಳ್ಳೇದು ಎಂದರು
ನಮ್ಮನ್ನ ಸೋಲಿಸಲು ಎಲ್ಲಿಂದ ಡೈರೆಕ್ಷನ್ ಬಂದಿದೆ ಎಂದು ನನಗೆ ಗೊತ್ತಿತ್ತು. ಜೊತೆಗೆ ಮಾಜಿ ಶಾಸಕ ಶ್ಯಾಮ್ ಘಾಟಗೆಯವರ ಚಾಡಿ ಮಾತು ಕೇಳುತ್ತಾರೆ ಅಂತ ಹೇಳಿದ್ದರು. ಅದಕ್ಕೆ ತಿರುಗೇಟು ನೀಡಿದ ಜಾರಕಿಹೊಳಿ, ನಾನು ಘಾಟಗೆ ಅಲ್ಲ, ನನ್ನ ಹೆಂಡತಿ ಮಕ್ಕಳ ಮಾತೂ ಕೇಳಲ್ಲ ಎಂದಿದ್ದಾರೆ.
ಘಾಟಗೆ ಹಾಗೂ ನೀವು ಕುಸ್ತಿ ಹಿಡಿರಿ ಈಗ ಚುನಾವಣೆಗೆ ನಿಂತಿದ್ದು ನಾವು. ಶ್ಯಾಮ್ ಘಾಟಗೆ ನೀವು ಕುಸ್ತಿ ಹಿಡಿರಿ. ನಮ್ಮ ಚುನಾವಣೆಗೆ ಯಾಕೆ ತೊಂದ್ರೆ ಮಾಡಿದ್ರಿ, ನಿಮಗೆ ಟಿಕೆಟ್ ಕೊಡಿಸಿ ಸಪೋರ್ಟ್ ಮಾಡಿದ್ದೇವು, ಆದರೆ, ನೀವ್ಯಾಕೆ ಹೀಗೆ ಮಾಡಿದ್ರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೇವಲ ಮಹೇಂದ್ರ ತಮ್ಮಣ್ಣವರ ಮಾತ್ರ ಅಲ್ಲ, ನಮ್ಮ ವಿರುದ್ದ ಹೇಳಿಕೆ ಕೊಡುವವರು ರಾಜ್ಯದ ತುಂಬ ಇದ್ದಾರೆ. ದೇವೆಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಎಷ್ಟು ಜನರನ್ನ ಬೆಳೆಸಿದರು ಅವರನ್ನೂ ಬೈತಾರೆ. ನಾವು ಇದನ್ನ ಗಂಭೀರವಾಗಿ ಪರಿಗಣಿಸಲ್ಲ. ಆದರೆ, ಬೇಟೆ ಸಿಗೋದನ್ನ ಕಾಯುತ್ತಾ ಕೂತಿರುತ್ತೇವೆ. ರಾಜಕಾರಣ ಯಾರ ಮನೆಯ ಆಸ್ತಿಯೂ ಅಲ್ಲ. ಜನ ಯಾರನ್ನ ಬೇಕಾದ್ರೂ ಗೆಲ್ಲಿಸ್ತಾರೆ, ಯಾರನ್ನ
ಬೇಕಾದ್ರೂ ಸೋಲಿಸ್ತಾರೆ. ಬೇರೆ ಪಕ್ಷಗಳಿಗೆ ಭವಿಷ್ಯ ಇಲ್ಲ ಎಂದು ಎಲ್ಲರೂ ಬಿಜೆಪಿಗೆ ಹೊರಟಿದ್ರು. ಆದರೆ, ಒಂದೇ ಚುನಾವಣೆ ಜನ ಎಲ್ಲಾ ಸಾಧ್ಯ ಇದೆ ಎನ್ನುವುದು ತೋರಿಸಿದರು. ಯಾರನ್ನಾದ್ರೂ ಗೆಲ್ಲಿಸ್ತಿವಿ ಸೋಲಿಸ್ತಿವಿ ಎಂದು ತೋರಿಸಿಕೊಟ್ಟಿದ್ದಾರೆ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಲು ಕಲಿಯಬೇಕು ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ವಿರುದ್ದ ವಾಗ್ದಾಳಿ ನಡೆಸಿದರು.


