Select Page

ಸತೀಶ್ ಜಾರಕಿಹೊಳಿ ವಿರುದ್ಧ ರಾಜ್ಯಪಾಲರಿಗೆ ಪತ್ರ : ಬಹಿರಂಗ ಸಮರಕ್ಕೆ ಮುಂದಾದ ಉಭಯ ನಾಯಕರು

ಸತೀಶ್ ಜಾರಕಿಹೊಳಿ ವಿರುದ್ಧ ರಾಜ್ಯಪಾಲರಿಗೆ ಪತ್ರ : ಬಹಿರಂಗ ಸಮರಕ್ಕೆ ಮುಂದಾದ ಉಭಯ ನಾಯಕರು

ಬೆಳಗಾವಿ : ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿ ಶಾಸಕ ಅಭಯ್ ಪಾಟೀಲ್ ನಡುವಿನ ಗುದ್ದಾಟ ಸಧ್ಯ ರಾಜ್ಯಪಾಲರ ಅಂಗಳಕ್ಕೆ ತಲುಪಿದ್ದು, ಸಚಿವ ಸತೀಶ್ ಜಾರಕಿಹೊಳಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಪಾಲಿಕೆ ಮೇಯರ್ ಶೋಭಾ ಸೋಮನಾಚೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಆಸ್ತಿ ಕರ ಹೆಚ್ಚಳ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಗೆದುಕೊಂಡ ನಿರ್ಧಾವನ್ನು ತಿದ್ದಿ ದಿನಾಂಕ ಬದಲಿಸಿದ್ದ ಆರೋಪದ ಮೇಲೆ ಪಾಲಿಕೆ ಆಯುಕ್ತರ ವಿರುದ್ಧ ಕ್ರಮಕ್ಕೆ ಆಡಳಿತ ಪಕ್ಷ ಬಿಜೆಪಿ ಆಗ್ರಹಿಸಿತ್ತು.

ಆಡಳಿತ ಪಕ್ಷದ ಆಗ್ರಹಕ್ಕೆ ಸಚಿವ ಸತೀಶ್ ಹಾರಕಿಹೊಳಿ ತನಿಖೆಗೆ ಯಾವುದೇ ಆಕ್ಷೇಪ ಇಲ್ಲ. ಆದರೆ ಪಾಲಿಕೆ ಆಯುಕ್ತರ ಕುರಿತು ನಾಗರಿಕ ಸೇವಾ ಇಲಾಖೆಗೆ ಮಾಹಿತಿ ನೀಡಿದ್ದೇ ಆದರೆ ನಾವು ಬೆಳಗಾವಿ ಪಾಲಿಕೆಯನ್ನು ವಿಸರ್ಜನೆ ಮಾಡುತ್ತೇವೆ ಎಂದು ಹೇಳಿದ್ದರು.

ಸಧ್ಯ ಸತೀಶ್ ಜಾರಕಿಹೊಳಿ ನೀಡಿದ್ದ ಸುಪರ್ ಸಿಡ್ ವಿಚಾರವನ್ನು ರಾಜ್ಯಪಾಲರ ಅಂಗಳಕ್ಕೆ ತಗೆದುಕೊಂಡು ಹೋಗಿರುವ ಬಿಜೆಪಿ ಈ ಎಲ್ಲಾ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪತ್ರ ಬರೆದಿದ್ದಾರೆ.

ಇನ್ನೂ ಬಿಜೆಪಿ ರಾಜ್ಯಪಾಲರಿಗೆ ಪತ್ರ ಬರೆಯುತ್ತಿದ್ದಂತೆ ಅತ್ತ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಭೆ ನಡೆಸಿದ್ದಾರೆ. ಒಟ್ಟಿನಲ್ಲಿ ಬೆಳಗಾವಿ ಉಭಯ ನಾಯಕರ ನಡುವಿನ ಜಗಳದಿಂದ ಪಾಲಿಕೆ ಆಡಳಿತಕ್ಕೆ ಕಿರಿಕಿರಿ ಆಗಿದ್ದು ಮಾತ್ರ ಸುಳ್ಳಲ್ಲ.

Advertisement

Leave a reply

Your email address will not be published. Required fields are marked *

error: Content is protected !!