
ದಿನದ ಮಟ್ಟಿಗೆ ಬ್ರಿಟಿಷ್ ರಾಯಭಾರಿಯಾದ ಹುಬ್ಬಳ್ಳಿ ಸಂಜನಾ ಹಿರೇಮಠ

ಬೆಂಗಳೂರು : ಒಂದು ದಿನದ ರಾಯಭಾರಿ ಸ್ಪರ್ಧೆಯಲ್ಲಿ 180 ಯುವತಿಯರ ಪೈಕಿ ಹುಬ್ಬಳ್ಳಿಯ ಸಂಜನಾ ಹಿರೇಮಠ ಆಯ್ಕೆಯಾಗುವ ಮೂಲಕ ದಿನದ ಮಟ್ಟಿದೆ ಬ್ರಿಟಿಷ್ ರಾಯಭಾರಿ ಆಗಿದ್ದಾರೆ.
ಅಂತರಾಷ್ಟ್ರೀಯ ಹೆಣ್ಣುಮಗು ದಿನದ ಅಂಗವಾಗಿ ಭಾರತದಲ್ಲಿರುವ ಬ್ರಿಟಿಷ್ ರಾಯಭಾರಿ ಕಚೇರಿ ದಿನದ ಮಟ್ಟಿಗೆ ರಾಯಭಾರಿ ಎಂಬ ಸ್ಪರ್ಧೇ ಆಯೋಜನೆ ಮಾಡಿತ್ತು. ಇದರಲ್ಲಿ ಸುಮಾರು 180 ಮಹಿಳೆಯರು ಪಾಲ್ಗೊಂಡಿದ್ದರು. ಇದರಲ್ಲಿ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಜನಾ ಹಿರೇಮಠ ವಿಜೇತರಾಗಿದ್ದಾರೆ.
ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಂಜನಾ ಹಿರೇಮಠ ಅವರಿಗೆ ಬ್ರಿಟಿಷ್ ರಾಯಭಾರಿ ಕಚೇರಿಯಲ್ಲಿ ಸಮಯ ಕಳೆಯಬೇಕು ಎಂಬ ಆಸೆ ಕೊನೆಗೂ ನನಸಾಗಿದೆ ಎಂದು ಸಂತಸಪಟ್ಟಿದ್ದಾರೆ.
ಕರ್ನಾಟಕ ಹಾಗೂ ಕೆರಳ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಐಯ್ಯರ್ ಮಾತನಾಡಿ. ಹೆಣ್ಣು ಮಕ್ಕಳ ಹಕ್ಕುಗಳು ಹಾಗೂ ಮಹಿಳಾ ನಾಯಕತ್ವದ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸಂಜನಾ ಕಾರ್ಯವೈಖರಿ ತೃಪ್ತಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸಂಜನಾ ಹಿರೇಮಠ ಅವರು ಆಸ್ಟ್ರೇಲಿಯಾ ಜೌನ್ಸಲ್ ಜನರಲ್ ಹಿಲರಿ ಜೊತೆ ಉತ್ತರ ಕರ್ನಾಟಕ ರೊಟ್ಟಿ ಊಟ ಸವೆದರು. ಈ ಸಂದರ್ಭದಲ್ಲಿ ಮಹಿಳಾ ನಾಯಕತ್ವದ ಕುರಿತು ಚರ್ಚೆ ನಡೆಸಿದರು.