
ಹಮಾಸ್ ಉಗ್ರರ ಪರ ಸ್ಟೇಟಸ್ ; ಹೊಸಪೇಟೆ ಮುಸ್ಲಿಂ ಯುವಕನ ಬಂಧನ

ವಿಜಯನಗರ : ಹಮಾಸ್ ಉಗ್ರಗಾಮಿಗಳನ್ನು ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದ ವಿಜಯನಗರದ ಹೊಸಪೇಟೆ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆಲಂ ಬಾಷಾ ( 20 ) ಯುವಕ ಹಮಾಸ್ ಉಗ್ರಗಾಮಿಗಳನ್ನು ಬೆಂಬಲಿಸಿ ಸ್ಟೇಟಸ್ ಹಾಕಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ನಾನು ಪ್ಯಾಲೆಸ್ಟೈನ್ ( palestine ) ಪರವಾಗಿದ್ದೇನೆ, ಪ್ಯಾಲೆಸ್ಟೈನ್ ಜಿಂದಾಬಾದ್ ಎಂದು ಬರೆದುಕೊಂಡಿದ್ದಾನೆ.
ಸಧ್ಯ ಇಸ್ರೇಲ್ ( Israel ) ಹಾಗೂ ಪ್ಯಾಲೆಸ್ಟೈನ್ ಹಮಾಸ್ ಉಗ್ರದ ನಡುವೆ ಕಳೆದ ಐದು ದಿನಗಳಿಂದ ನಿರಂತರ ಸಮರ ನಡೆಯುತ್ತಿದ್ದು ಇತ್ತ ಭಾರತ ಉಗ್ರಗಾಮಿಗಳ ವಿರುದ್ಧ ಹೋರಾಟದ ಹಾದಿ ಹಿಡಿದಿರುವ ಇಸ್ರೇಲ್ ಗೆ ಬೆಂಬಲ ನೀಡಿದೆ.
ಈ ಮಧ್ಯೆ ಕೆಲವರು ಉಗ್ರರ ಪರವಾಗಿ ಸ್ಟೇಟಸ್ ಹಾಕುವ ಮೂಲಕ ಭಾರತ ವಿರೋಧಿ ನಡೆ ಅನುಸರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ದೇಶದ ಏಕತೆ ಎತ್ತಿ ಹಿಡಿಯುವ ಕೆಲಸ ಆಗಬೇಕು ಎಂಬುದು ಹಲವರ ವಾದ.
ಸಧ್ಯ ಯುವಕನ ವಿರುದ್ಧ ಹೊಸಪೇಟೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಸಧ್ಯ ಪೊಲೀಸರು ವಿಚಾರಣೆ ನಡೆಸಿದ್ದು ಯುವಕ ಆಲಂ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮೀತಿ ಅಧ್ಯಕ್ಷನ ಸಂಬಂಧಿ ಎಂದು ತಿಳಿದುಬಂದಿದೆ.