
ಅಂತರಾಜ್ಯ ಕಳ್ಳರಿಂದ 1 ಕೆ.ಜಿ 262 ಗ್ರಾಂ ಚಿನ್ನಾಭರಣಗಳು ವಶಕ್ಕೆ ಇಬ್ಬರ ಆರೋಪಿಗಳ ಬಂಧನ

ಬೆಂಗಳೂರಿನ ಕೇಂದ್ರ ವಿಭಾಗದ ಹಲಸೂರ್ ಗೇಟ್ ಪೋಲಿಸರಿಂದ ಮಹತ್ವದ ಕಾರ್ಯಾಚರಣೆ ನಗರದ ಹಲಸೂರ ಗೇಟ್ ವ್ಯಾಪ್ತಿಯಲ್ಲಿ ಬರುವ ಲಕ್ಷ್ಮೀ ಗೋಲ್ಡ್ ಜ್ಯುವೆಲರಿಯ ಮಾಲೀಕರಾದ ಅಭಿಷೇಕ ಜೈನ್ ಅವರು ತಮ್ಮ ಅಂಗಡಿಯ ಸೆಲ್ಸ್ ಮ್ಯಾನ ಆದ ಲಾಲಸಿಂಗ್ ಬಿನ್ ರಾವ ಇತನಿಗೆ ನೆರೆ ರಾಜ್ಯದ ಆಂದ್ರಪ್ರದೇಶದ ನಲ್ಲೂರಿಗೆ ಹೋಗಿ ಅಲ್ಲಿರುವ ಮುಕೇಶ ಜ್ಯುವೆಲರಿ ಹಾಗೂ ಶುಭಂ ಜ್ಯುವೆಲರಿ ಶಾಪಗಳಿಗೆ 1ಕೆ.ಜಿ 262 ಗ್ರಾಂ ನಷ್ಟು ಚಿನ್ನಾಭರಣಗಳನ್ನು ಕೊಟ್ಟು ಬರಲು ಸೂಚಿಸಿರುತ್ತಾರೆ.
ಲಾಲಸಿಂಗ ಬಿನ್ ರಾವ ತಮ್ಮ ಮಾಲೀಕನಿಗೆ ಸೂಚಸಿದಂತೆ ಆಂದ್ರಪ್ರದೇಶದ ನಲ್ಲೂರಿಗೆ ತೆರಳಿ ಅಲ್ಲಿಂದ ತಮ್ಮ ಅಂಗಡಿ ಮಾಲಿಕನಿಗೆ ಕರೆ ಮಾಡಿ ತನ್ನ ಬಳಿ ಇದ್ದ 1 ಕೆ.ಜಿ 262 ಗ್ರಾಂ ಚಿನ್ನವನ್ನ ಯಾರೋ ಅಪರಿಚಿತರು ನನಗೆ ಹೆದರಿಸಿ ದೋಚಿದರೆಂದು ಮಾಹಿತಿ ನೀಡಿದನು.
ನಂತರ ಜ್ಯೂವೆಲರಿ ಮಾಲಿಕರಾದ ಅಭಿಷೇಕ್ ಜೈನ್ ಗಾಬರಿಗೊಂಡು ಲಾಲ್ ಸಿಂಗ ಇತನನ್ನು ನಲ್ಲೂರಿನಿಂದ ಮರಳಿ ಕರೆಸಿಕೊಂಡು ಬೆಂಗಳೂರಿನ ಹಲಸೂರ ಗೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನ ದಾಖಲು ಮಾಡುತ್ತಾರೆ.
ಜ್ಯೂವೆಲರಿ ಅಂಗಡಿ ಮಾಲಿಕನ ದೂರಿನ ಆಧಾರದ ಮೇಲೆ
ಚುರುಕಿನ ಕಾರ್ಯಾಚರಣೆ ನಡೆಸಿದ ಹಲಸೂರ ಗೇಟ್ ಪೋಲಿಸರು ಈ ಪ್ರಕರಣದಲ್ಲಿ ಸೇಲ್ಸ್ ಮ್ಯಾನ ಲಾಲ್ ಸಿಂಗ್ ಇತನನ್ನು ವಶಕ್ಕೆ ಪಡೆದು ಅವನ ಬಳಿ ವಿಚಾರಿಸಿದಾಗ ಕಿಲಾಡಿ ಆರೋಪಿ ಲಾಲಸಿಂಗ ಬಿನ್ ರಾವ್ ನೈಜತೆಯನ್ನು ಬಾಯಿಬಿಟ್ಟಿದ್ದಾನೆ.
ಈ ಪ್ರಕರಣದಲ್ಲಿ ಲಾಲ್ ಸಿಂಗ್ ಬಿನ್ ರಾವ ಇತನು ಮೂವರು ಸಹಚರನೊಂದಿಗೆ ಆಭರಣಗಳನ್ನ ರಾಜಸ್ಥಾನದಲ್ಲಿರುವ ತನ್ನ ಸ್ನೇಹಿತನಾದ ಪ್ರಕರಣದ 4 ನೇ ಆರೋಪಿ ಅಭಿಷೇಕ್ ಬಿನ್ ಕುಶಾಲಸಿಂಗ ಇತನಿಗೆ ಮಾರಾಟ ಮಾಡಿರುತ್ತಾನೆ.
ರಾಜಸ್ಥಾನದಲ್ಲಿ ತೆಲೆ ಮರೆಸಿಕೊಂಡಿರುವ ಬಗ್ಗೆ ಮಾಹಿಯನ್ನು ಪಡೆದ ಹಲಸೂರ ಗೇಟ್ ಪೋಲಿಸ ಉಪವಿಭಾಗದ ಎ.ಸಿ.ಪಿ ಶೇಖರ್ ಚಲವಾದಿ ಹಾಗೂ ಇನ್ಸಪೆಕ್ಟರ್ ಹನುಮಂತ ಭಜಂತ್ರಿ ಇವರ ಮಾರ್ಗದರ್ಶದಲ್ಲಿ ತಂಡ ರಚಿಸಿ ಇಲಾಖೆಯ ಸಿಬ್ಬಂದಿಯ ವಶಕ್ಕೆ ಪಡೆದ 1 ನೇ ಆರೋಪಿ ಲಾಲಸಿಂಗ ಬಿನ್ ರಾವ ಇತನ ಜೊತೆಗೆ ಪೋಲಿಸರು ಪ್ರಕರಣ ಭೇದಿಸಲು ಬೆಂಗಳೂರಿನಿಂದ – ರಾಜಸ್ಥಾನಕ್ಕೆ ತೆರಳಿ ಪ್ರಕರಣದ 4 ನೇ ಆರೋಪಿಯಾದ ಅಭಿಷೇಕ ಬಿನ್ ಕುಶಾಲಸಿಂಗ ನನ್ನು ರಾಜಸ್ಥಾನ ರಾಜ್ಯದಲ್ಲಿ ವಶಕ್ಕೆ ಪಡೆದು ಆತನಿಂದ 939 ಗ್ರಾಂ ಆಭರಣಗಳನ್ನು ಜಪ್ತಿಮಾಡುವಲ್ಲಿ ಯಶಸ್ವಿಯಾದರು.
ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಂದ 1.ಕೆ.ಜಿ 262 ಗ್ರಾಂ ಚಿನ್ನ ಸುಮಾರು ಒಟ್ಟು 75 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳವಲ್ಲಿ ಹಲಸೂರಗೇಟ್ ಪೋಲಿಸ್ ಠಾಣೆಯ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗ ಯಶಸ್ವಿಯಾಗಿ ಕಾರ್ಯಾಚರಣೆ ನಿರ್ವಹಿಸಿದ್ದಾರೆ.
ಪ್ರಕರಣಕ್ಕೆ ಸಂಭಂದಿಸಿದಂತೆ ಬೆಂಗಳೂರು ಕೇಂದ್ರ ನಗರದ ಉಪ ಪೋಲಿಸ ಆಯುಕ್ತರಾದ ಹೆಚ್. ಟಿ ಶೇಖರ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ವರ್ಗದವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗಳಿಗೆ ಸೂಕ್ತ ಬಹುಮಾನ ಘೋಷಣೆ ಮಾಡಿ ಹರ್ಷ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ 2ನೇ ಮತ್ತು 3ನೇ ಆರೋಪಿಗಳು ತಲೆ ಮರೆಸಿಕೊಂಡಿದು ಪೋಲಿಸರು ಅವರಿಗೆ ಬಲೆ ಬಿಸಿದ್ದಾರೆ ಎಂದು ನಗರ ಉಪ ಪೋಲಿಸ್ ಆಯುಕ್ತರಾದ ಹೆಚ್.ಟಿ ಶೇಖರ ಅವರು ಮಾಹಿತಿ ನೀಡಿದರು.
ಈ ಕಾರ್ಯಾಚರಣೆಯು ಬೆಂಗಳೂರು ಕೇಂದ್ರ ನಗರದ ಉಪ ಪೋಲಿಸ ಆಯುಕ್ತರಾದ ಹೆಚ್. ಟಿ ಶೇಖರ್ ಉಪವಿಭಾಗದ ಎ.ಸಿ.ಪಿ ಶ್ರೀನಿವಾಸ್ ಚಲವಾದಿ ಇವರ ಮಾರ್ಗದರ್ಶನದಲ್ಲಿ ಹಾಗೂ ಇನ್ಸಪೆಕ್ಟರ್ ಹನುಮಂತ ಬಜಂತ್ರಿ ಇವರ ನೇತೃತ್ವದಲ್ಲಿ ಮತ್ತು ಪಿ.ಎಸ್.ಐ ಎಂ ಶ್ರೀಕುಮಾರ್ ಹಾಗೂ ಸಿಬ್ಬಂದಿಗಳಾದ ನಾರಾಯಣ್, ಮುರಳಿಧರ್,ಸುರೇಶ, ರಂಗನಾಥ, ನಾಗಪ್ಪ ಜೋಗಿ, ಶಶಿಕಾಂತ ಮತ್ತು ಟಿ ನಾಗೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. *********