ಅಥಣಿಯಲ್ಲಿ ಪರಿಚಯ ಮಾಡಿಕೊಂಡು ರಾಯಬಾಗದಲ್ಲಿ ಅತ್ಯಾಚಾರ ಎಸಗಿದ ಕಾಮುಕರು ಅಂದರ್…!
ಬೆಳಗಾವಿ : ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ಬಾಲಕಿ ಮೇಲೆ ದುರುಳರು ಸಾಮೂಹಿತ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಮಾಡಿಕೊಂಡು ಅಪ್ರಾಪ್ತೆಯನ್ನು ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಗೆ ಕರೆದೊಯ್ದ ದುರುಳರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತೆಯ ಜೊತೆ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ಅಭಿಷೇಕ ದೇವನೂರು ಎಂಬಾತ ಕಳೆದ ತಿಂಗಳು ಅಥಣಿ ತಾಲೂಕಿನ ಕೊಕಟನೂರು ಯಲ್ಲಮ್ಮ ದೇವಸ್ಥಾನದಲ್ಲಿ ಪರಸ್ಪರ ಪರಿಚಯವಾಗಿತ್ತು. ನಂತರ ಇಬ್ಜರೂ Instagram ನಲ್ಲಿ ಮೆಸೆಜ್ ಮಾಡುತ್ತಿದ್ದರು .
ಜ. 3 ರಂದು ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಯುವತಿಯನ್ನು ನಂಬಿಸಿ ತನ್ನ ಸ್ನೇಹಿತ ಆದಿಲ್ ಶಾ ಜಮಾದಾರ್ ಎಂಬಾತನ ಕಾರಿನಲ್ಲಿ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಅಪ್ರಾಪ್ತೆಯ ಸ್ನೇಹಿತೆಯೂ ಇದ್ದಳು.
ಸವದತ್ತಿಗೆ ಹೋಗುವುದಾಗಿ ಹೇಳಿ ಸವಸುದ್ದು ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು ಓರ್ವ ಅಪ್ರಾಪ್ತೆಯ ಮೇಲೆ ಅಭಿಷೇಕ ದೇವನೂರು ಜೊತೆ ಅಲಕನೂರು ಗ್ರಾಮದ ಕೌತುಕ್ ಬಾಬಾಸಾಹೇಬ್ ಬಡಿಗೇರ ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ. ಇದೇ ಸಂದರ್ಭದಲ್ಲಿ ಇನ್ನೊಬ್ಬ ಅಪ್ರಾಪ್ತೆಯ ಮೇಲೆ ಕಾರಿನಲ್ಲೇ ಹಾರೂಗೇರಿ ಮೂಲದ ಆದಿಲ್ ಶಾ ಜಮಾದಾರ್ ಅತ್ಯಾಚಾರ ಮಾಡಿದ್ದು ಈ ಕುರಿತು ಜ.13 ರಂದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಹಾರೂಗೇರಿ ಪೊಲೀಸರು ಪೊಲೀಸರು ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅತ್ಯಾಚಾರ ಎಸಗಿದ್ದ
ಆರೋಪಿಗಳಾದ ಅಭಿಷೇಕ್ ಹಾಗೂ ಆದಿಲ್ ಶಾ ಜಮಾದರ್ ನನ್ನು ವಶಕ್ಕೆ ಪಡೆದಿದ್ದು ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಬಲೆ ಬೀಸಿದ್ದಾರೆ.
ಗೋವಾ ಬರದಿದ್ದರೆ ವೀಡಿಯೋ ಹರಿಬಿಡುವ ಬೆದರಿಕೆ :
ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಿಬರುವುದಾಗಿ ಹೇಳಿ ಅಪ್ರಾಪ್ತೆಯರನ್ನು ಕರೆದೊಯ್ದು ದುರುಳರು ಅತ್ಯಾಚಾರ ಎಸಗಿದ್ದಲ್ಲದೆ ಅವರ ಜೊತೆಗಿದ್ದ ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ನಂತರ ಪದೇ ಪದೇ ವೀಡಿಯೋ ತೋರಿಸಿ ನಮ್ಮ ಜೊತೆ ಗೋವಾಗೆ ಬರದಿದ್ದರೆ ವೀಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಕೊನೆಗೆ ದುರುಳರ ಅಟ್ಟಹಾಸಕ್ಕೆ ನಲುಗಿದ ಅಪ್ರಾಪ್ತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದಲ್ಲಿ ಓರ್ವ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯನ್ನು ಬಲೆಗೆ ಬೀಳಿಸಿಕೊಂಡು ಆರೋಪಿಗಳು ಕೃತ್ಯ ಎಸಗಿದ್ದು ಬಯಲಾಗಿದ್ದು, ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ.
ಡಾ. ಭೀಮಾಶಂಕರ ಗುಳೆದ್
ಬೆಳಗಾವಿ ಎಸ್ಪಿ


