Select Page

ನನ್ನ ಸುದ್ದಿಗೆ ಬಂದರೆ ಆತನ ವೈಯಕ್ತಿಕ ವಿಚಾರ ಬಿಚ್ಚಿಡುವೆ – ಮತ್ತೊಮ್ಮೆ ಗುಡುಗಿದ ಸಾಹುಕಾರ

ನನ್ನ ಸುದ್ದಿಗೆ ಬಂದರೆ ಆತನ ವೈಯಕ್ತಿಕ ವಿಚಾರ ಬಿಚ್ಚಿಡುವೆ – ಮತ್ತೊಮ್ಮೆ ಗುಡುಗಿದ ಸಾಹುಕಾರ

ಬೆಳಗಾವಿ : ಈಗಾಗಲೇ ಡಿ.ಕೆ ಶಿವಕುಮಾರ್ ನನ್ನ ವಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಇನ್ಮುಂದೆ ನನ್ನ ವಿಷಯ ಕುರಿತಾಗಿ ಮಾತಮಾಡಿದರೆ ಅವರ ವೈಯಕ್ತಿಕ ವಿಚಾರ ಕುರಿತು ಮಾತನಾಡಬೇಕಾಗುತ್ತದೆ ಎಂದು ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

VIDEO – ಥೂ…ಥೂ.. ಎಂದು ಸಾಹುಕಾರ್ ರಮೇಶ ಉಗಿದಿದ್ದು ಯಾರಿಗೆ ? – ಇದನ್ನೂ ನೋಡಿ Belagavivoice https://belagavivoice.com/ramesh_jarakiholi_angry_moment/#.Y9P4WSN0QH8.whatsapp

ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಇದನ್ನು ಗಟ್ಟಿಯಾಗಿ ಎದುರಿಸಿ ಹೊರಗೆ ಬಂದಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಮಾತಾಡಿದ್ದು, ನನ್ನ ಸಿಡಿ ಕೇಸ್ ಸಿಬಿಐಗೆ ಕೊಡಿಸುತ್ತೇನೆ‌.
ಸಿಡಿಯಲ್ಲಿ ಮಹಾನಾಯಕನ ಕೈವಾಡ ಇರುವುದಕ್ಕೆ ಸಾಕ್ಷಿ ಇದ್ದು. ನಲವತ್ತು ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿಯನ್ನ ಅದರಲ್ಲಿ ಸಿಕ್ಕಿಹಾಕಿಸಿದ್ದೇನೆ ಅನ್ನೋ ಸಾಕ್ಷಿ ಇದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಸಿಡಿ ಕೇಸ್ ಸಿಬಿಐಗೆ ಒಪ್ಪಿಸಬೇಕು ಎಂದು ಪಕ್ಷದ ವರಿಷ್ಠರಿಗೆ ಹೇಳಿದ್ದೇನೆ. ಸಿಡಿ ಕೇಸ್ ನ ಇಬ್ಬರು ಪ್ರಮುಖ ಆರೋಪಿಗಳಾದ ಶಿರಾ ಹಾಗೂ ದೇವನಹಳ್ಳಿ ಮೂಲದವರು. ಇದರಲ್ಲಿ ದೇವನಹಳ್ಳಿ ಮೂಲದವನ ಮನೆ ಮೇಲೆ ದಾಳಿಯಾದಾಗ, ಆತನ ಮನೆಯಲ್ಲಿ ಸುಮಾರು ಸಿಡಿಗಳು ಹಲವು ನಸಯಕರದ್ದು ಸಿಕ್ಕಿವೆ. ಈ ಕೆಲಸ ಮಹಾನ್ ನಾಯಕನ ಕುತಂತ್ರದಿಂದ ಆಗಿದೆ.
ಸಿಬಿಐ ವಿಚಾರಣೆ ನಡೆದರೆ ಎಲ್ಲವೂ ಹೊರಗೆ ಬರುತ್ತೆ ಎಂದರು.

ಸಾಹುಕಾರ್ ಸಿಡಿ ಹರಿಬಿಟ್ಟಿದ್ದ ಮಹಾನ್ ನಾಯಕ ಖರ್ಚು ಮಾಡಿದ್ದು ಎಷ್ಟು ಕೋಟಿ?

ಬೆಳಗಾವಿ : ರಾಜ್ಯದಲ್ಲಿ ಮತ್ತೆ ಸಿಡಿ ಕುರಿತಾದ ಚರ್ಚೆ ಮುಂದುವರಿದಿದೆ. ಮಾಜಿ‌‌ ಸಚಿವ ರಮೇಶ್ ಜಾರಕಿಹೊಳಿ ಸಿಡಿಸಿದ ಆ ಒಂದು ಬಾಂಬ್ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಹಾಗಾದರೆ ರಮೇಶ್ ಜಾರಕಿಹೊಳಿ ವಿರುದ್ಧ ತಂದ ಸಿಡಿ ಹಿಂದೆ ಯಾರೆಲ್ಲ ಕೈವಾಡ ಇದೆ ಎಂಬುದು ಒಂದುಕಡೆಯಾದರೆ ಅದನ್ನು ಹೊರತರಲು ಕೋಟ್ಯಾಂತರ ರೂ ಖರ್ಚು ಮಾಡಲಾಗಿದೆಯಾ ಎಂಬ ಪ್ರಶ್ನೆ ಮೂಡಿದೆ.

ನಿನ್ನೆ ರಮೇಶ್ ಜಾರಕಿಹೊಳಿ ನಡೆಸಿದ್ದ ಸುದ್ದಿಘೋಷ್ಠಿಯಲ್ಲಿ ಈ ವಿಷಯ ಹೊರಹಾಕಿದ್ದು ಅವರ ವಿರುದ್ಧ ಬಿಡುಗಡೆಯಾದ ಸಿಡಿಗೆ ಕೋಟ್ಯಾಂತರ ರೂ. ಖರ್ಚು ಮಾಡಲಾಗಿದೆಯಂತೆ. 

ನೂರು ಸಿಡಿ – 40 ಕೋಟಿ ಖರ್ಚು : ರಮೇಶ್ ಜಾರಕಿಹೊಳಿ ವಿರುದ್ಧ ನಡೆದ ಸಿಡಿ ಪ್ರಕರಣದಲ್ಲಿ 40 ಕೋಟಿ ರೂ ಖರ್ಚು ಮಾಡಲಾಗಿದೆ ಎಂಬ ಆರೋಪವನ್ನು  ಸ್ವತಃ ಅವರೇ ಮಾಡಿದ್ದಾರೆ. ಜೊತೆಗೆ ಸಿಡಿ ಕೇಸ್ ನ ಇಬ್ಬರು ಪ್ರಮುಖ ಆರೋಪಿಗಳಾದ ಶಿರಾ ಹಾಗೂ ದೇವನಹಳ್ಳಿ ಮೂಲದವರು. ಇದರಲ್ಲಿ ದೇವನಹಳ್ಳಿ ಮೂಲದವನ ಮನೆ ಮೇಲೆ ದಾಳಿಯಾದಾಗ, ಆತನ ಮನೆಯಲ್ಲಿ ನೂರಾರು ಸಿಡಿಗಳು ಹಲವು ನಾಯಕರದ್ದು ಸಿಕ್ಕಿವೆ. ಈ ಕೆಲಸ ಮಹಾನ್ ನಾಯಕನ ಕುತಂತ್ರದಿಂದ ಆಗಿದೆ ಎಂದು ಆರೋಪಿಸಿದ್ದಾರೆ.

ಡಿಕೆ ಶಿವಕುಮಾರ್ ರಮೇಶ್ ಜಾರಕಿಹೊಳಿ ಟಾರ್ಗೆಟ್  :

ಡಿಕೆಶಿಗೆ ನನ್ನ ಒಬ್ಬನದ್ದೇ ಹೆದರಿಕೆ ಇದೆ‌, ಅವನನ್ನ ಮುಗಿಸುತ್ತೇನೆ ಅಂತಾ ಹೆದರಿಕೆ ಇದೆ. ನಾನೊಬ್ಬನೇ ಅವನನ್ನ ಎದುರಿಸುವವ, ಇಂತಹ ನೂರು ಸಿಡಿ ಬರಲಿ ನಾನು ಗಟ್ಟಿ ಇದ್ದೇನೆ ಎಂದರು. ಸ್ಥಳೀಯ ನಾಯಕರ ಪಾತ್ರ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ,
ಅವರು ಏಜೆಂಟ್‌ರು ನಾನು ಅವರ ಬಗ್ಗೆ ಮಾತನಾಡವುದರಲ್ಲಿ ಅರ್ಥ ಇಲ್ಲ. ಎನಿದ್ದರೂ ಡಿಕೆಶಿ ಆ್ಯಂಡ್ ಕಂಪನಿ ನೋಡೋಣ. ನನ್ನ ಕೇಸ್ ಬಿಡುವುದಿಲ್ಲ ಸಿಬಿಐಗೆ ಕೊಡಿಸುತ್ತೇನೆ ಎಂದು ಪುನರಚ್ಚರಿಸಿದರು.

ಕಾಂಗ್ರೆಸ್‌ನಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ –

ನಾನು ಆರನೇ ಅವಧಿ ಶಾಸಕ ನನಗೆ ಕಾನೂನು ಅರಿವು ಇದೆ.‌‌ ಯಾವ ಅಭ್ಯರ್ಥಿ ಪರವಾಗಿ ನಾನು ಹೇಳಿಲ್ಲ. ಕಾರ್ಯಕ್ರಮದಲ್ಲಿ ಎನೂ ಮಾತಾಡಿದೀನಿ ಗೊತ್ತಿಲ್ಲ.
ಗ್ರಾಮೀಣ ಶಾಸಕರು ಸಾರ್ವಜನಿಕವಾಗಿ ಜನರಿಗೆ ದಿನಬಳಕೆ ವಸ್ತು ಹಂಚುತ್ತಿದ್ದಾರೆ ಅದು ಆಮಿಷ ಅಲ್ವಾ?. ಕಾಂಗ್ರೆಸ್ ಈ ಮಟ್ಟಿನ ಸಣ್ಣ ರಾಜಕಾರಣ ಮಾಡಬಾರದು. ಈಗಿನ ಬೆಳಗಾವಿ ಗ್ರಾಮೀಣ ಶಾಸಕರು ತಮ್ಮ ಅಧಿಕಾರದ ಸಂದರ್ಭದಲ್ಲಿ ಬೆಂಗಳೂರು, ದೆಹಲಿ ಓಡಾಟದಲ್ಲಿ ಜನರನ್ನ ಮರೆತರು. ಆರು ಸಾವಿರದಿಂದ ಹತ್ತು ಸಾವಿರ ಕೋಟಿ ಖರ್ಚು ಆಗಲಿ ಅಂತಾ ಬೇರೆ ಉದ್ದೇಶಕ್ಕೆ ಹೇಳಿದ್ದೇನೆ. ಅಲ್ಲಿ ಮೂಲಭೂತ ಸೌಕರ್ಯಕ್ಕೆ ಹಣ ಕೊಡುವುದಾಗಿ ಹೇಳಿದ್ದೇನೆ. ಅವರು ಉಚಿತ ಕರೆಂಟ್ ಕೊಡುತ್ತೇನೆ ಅಂದು ಹೇಳಿರುವೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

Advertisement

Leave a reply

Your email address will not be published. Required fields are marked *

error: Content is protected !!