ಸಾಹುಕಾರ್ ಸೋಲಿಸಲು ಲಕ್ಷ್ಮೀ ಅಸ್ತ್ರ : ಪಂಚಮಸಾಲಿ ಮುಖಂಡರ ಸಭೆ ಹಿಂದಿನ ಮಾಸ್ಟರ್ ಪ್ಲ್ಯಾನ್ ಏನು?
ಬೆಳಗಾವಿ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ್ ನಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸಬೇಕು ಎಂಬ ಆಗ್ರಗವನ್ನು ಪಂಚಮಸಾಲಿ ಸಮುದಾಯದ ಮುಖಂಡರು ಮಾಡುತ್ತಿದ್ದಾರೆ.
ಹೌದು 2A ಮೀಸಲಾತಿಗೆ ಆಗ್ರಹಿಸಿ ಕಳೆದ ಕೆಲವು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿರುವ ಪಂಚಮಸಾಲಿ ಸಮುದಾಯಕ್ಕೆ ಈವರೆಗೂ ಮಿಸಲಾತಿ ದೊರೆತಿಲ್ಲ. ಜೊತೆಗೆ ಬೆಂಗಳೂರಿನಲ್ಲಿ ಕೂಡಲಸಂಗಮ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿದಿದೆ.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರು ಶ್ರೀಗಳಿಗೆ ಬೇಡಿಕೆ ಇಟ್ಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೋಕಾಕ್ ಮತಕ್ಷೇತ್ರದಿಂದ ಸ್ಪರ್ಧೇ ಮಾಡಬೇಕು ಎಂಬ ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಶ್ರೀಗಳು ನಗುವಿನ ಉತ್ತರ ಒಂದೇ ನೀಡಿದ್ದಾರೆ.
ಒಟ್ಟಿನಲ್ಲಿ ಜಾರಕಿಹೊಳಿ ಮನೆತನವನ್ನು ಸೋಲೊಸುವ ಲೆಕ್ಕಾಚಾರದಲ್ಲಿ ಕೆಲವರು ಇದ್ದು ಜಾತಿ ಆದಾರಿತ ಒಡೆಯುವ ಲೆಕ್ಕಾಚಾರ ಹೊಂದಿದ್ದಾರೆ. ಆದರೆ ಸಮುದಾಯದ ಗಟ್ಟಿಧ್ವನಿಯಾದ ಶ್ರೀಗಳು ರಾಜಕಾರಣ ಬದಿಗಿಟ್ಟು ಕೋವಲ ಮೀಸಲಾತಿ ಹೋರಾಟಕ್ಕೆ ಮಾತ್ರ ಧ್ವನಿ ಆಗುವರಾ ಎಂಬುದನ್ನು ಕಾದು ನೋಡಬೇಕು.