
ರಾಜಾಹುಲಿಗೆ ಮಹತ್ವದ ಸ್ಥಾನ ನೀಡಿದ ಬಿಜೆಪಿ ಹೈಕಮಾಂಡ್ : ಯಡಿಯೂರಪ್ಪ ಕಮಲಕ್ಕೆ ಅನಿವಾರ್ಯ ಎಂಬುದು ಮತ್ತೊಮ್ಮೆ ಸಾಬೀತು

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡ ಬಿ.ಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದೆ.
ಬಿಜೆಪಿ ಸಂಸದೀಯ ಮಂಡಳಿ ಪುನರ್ ರಚನೆಯಾಗಿದ್ದು 11 ಸದಸ್ಯರ ಪಟ್ಟಿಯಲ್ಲಿ ಬಿ.ಎಸ್ ಯಡಿಯೂರಪ್ಪ ಹೆಸರು ಸೇರ್ಪಡೆಯಾಗಿದೆ. ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಇರುವ ಈ ಸಮೀತಿಯಲ್ಲಿ ಕರ್ನಾಟಕದ ರಾಜಾಹುಲಿ ಯಡಿಯೂರಪ್ಪ ಹಾಗೂ ಬಿ.ಎಲ್ ಸಂತೋಷ್ ಇದ್ದಾರೆ.
ಕೆಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಸಮೀತಿಯಿಂದ ಔಟ್ ಆಗಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್ ಯಡಿಯೂರಪ್ಪ ಅವರನ್ನು ಉಪಯುಕ್ತ ರೀತಿಯಲ್ಲಿ ಬಿಜೆಪಿ ಪಕ್ಷ ಬಳಸಿಕೊಳ್ಳುವಲ್ಲಿ ಮುಂದಾಗಿದ್ದು ಮಹತ್ವದ ನಿರ್ಧಾರ ಕೈಗೊಂಡಿದೆ.
ಅಷ್ಟೇ ಅಲ್ಲದೆ ಕರ್ನಾಟಕ ಬಿಜೆಪಿ ಪಾಲಿಗೆ ರಾಜಾಹುಲಿ ಯಡಿಯೂರಪ್ಪ ಸುಪ್ರೀಂ ಆಗಿದ್ದಂತು ಸತ್ಯ. ಮುಂಬರುವ ಚುನಾವಣೆಯಲ್ಲಿ ಇವರನ್ನು ಕಡೆಗಣಿಸಿದರೆ ಪಕ್ಷಕ್ಕೆ ಉಂಟಾಗುವ ನಷ್ಟವನ್ನು ಮನಗಂಡು ಬಿಜೆಪಿ ಮಹತ್ವದ ನಿರ್ಧಾರ ಕೈಗೊಂಡಿರುವುದು ವಿಶೇಷ. ಒಟ್ಟಿನಲ್ಲಿ ರಾಜಾಹುಲಿ ದರ್ಬಾರ್ ಮುಂದುವರಿದಿದೆ.