Select Page

ಜಾತ್ಯಾತೀತ ಭಾರತಕ್ಕೆ ‘ರೈಲ್ ಜಿಹಾದ್’ ಕಂಟಕ…!

ಜಾತ್ಯಾತೀತ ಭಾರತಕ್ಕೆ ‘ರೈಲ್ ಜಿಹಾದ್’ ಕಂಟಕ…!

ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ, ದಿನದಿಂದ ದಿನಕ್ಕೆ ಪ್ರಗತಿಯನ್ನು ಕಾಣುತ್ತಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರವು 2014ರಿಂದ ಅಧಿಕಾರದ ಚುಕ್ಕಾಣಿ ಹಿಡಿದ ನಂತರವಂತೂ ಭಾರತದ ಸಾರ್ವಜನಿಕ ವಲಯದ ಇಲಾಖೆಗಳು ಗಣನೀಯವಾದ ಬೆಳವಣಿಗೆಯನ್ನು ಕಾಣುತ್ತಿದೆ. ಅದಕ್ಕೆ ಸೂಕ್ತ ಹಾಗು ಸಮಂಜಸ ನಿದರ್ಶನಗಳಲ್ಲಿ ಒಂದು ಭಾರತದ ರೈಲ್ವೆ ಇಲಾಖೆ.

2014ರಿಂದ ಈಚೆಗೆ ಭಾರತದ ರೈಲ್ವೆ ಇಲಾಖೆಯು ನಿರಂತರ ಪ್ರಗತಿಯನ್ಬು ಹೊಂದುತ್ತಲೇ ಬಂದಿದೆ. 31,180 ಕಿಲೋಮೀಟರ್ ಗಳ ಹೆಚ್ಚಿನ ಹಳಿಗಳನ್ನು ವಿಸ್ತರಿಸಿಕೊಂಡಿದೆ. ವಿದ್ಯುತ್ತೀಕರಣದಲ್ಲಿಯೂ ಗಣನೀಯ ಅಭಿವೃದ್ಧಿ ಹೊಂದಿದ್ದು, 2014ರಿಂದ 2024ರವರೆಗೆ ಒಟ್ಟು 41,655 ಕಿಲೋಮೀಟರ್ ವಿದ್ಯುತ್ತೀಕರಣದ ಕೆಲಸವೂ ಮುಗಿಸಲಾಗಿದೆ.

ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡಿದ ಪರಿಣಾಮ 2004-2014ರ ದಶಕದಲ್ಲಿ ವಾರ್ಷಿಕ 171ರಷ್ಟು ಸಂಭವಿಸುತ್ತಿದ್ದ ಅಪಘಾತಗಳು 2014-2024ರ ದಶಕದಲ್ಲಿ ವಾರ್ಷಿಕವಾಗಿ 68ಕ್ಕೆ ಇಳಿಯಿತು. 2024-2025ರ ಸಾಲಿನಲ್ಲಿ ಭಾರತೀಯ ರೈಲ್ವೆಯ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು ಬಜೆಟ್ ಅಲ್ಲಿ 2,62,200 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ.

ಭಾರತೀಯ ರೈಲ್ವೆ ಇಲಾಖೆಯ ಈ ಆಮೂಲಾಗ್ರ ಅಭಿವೃದ್ಧಿಯನ್ನು ಸಹಿಸಲಾಗದೆ, ಕೆಲವು ದೇಶದ್ರೋಹಿಗಳು ದೇಶದ ಒಳಗೇ ಇದ್ದುಕೊಂಡು ದೇಶಕ್ಕೆ ಕಂಟಕ ಪ್ರಾಯವಾಗುತ್ತಿದ್ದಾರೆ.

ವಿದೇಶಿಗರ ಹುನ್ನಾರ : ಇತ್ತೀಚೆಗೆ ನಡೆದ ಕೆಲವು ರೈಲ್ವೆ ಅಪಘಾತಗಳು ಆಕಸ್ಮಿಕವಾಗಿ ಅಲ್ಲದೆ ದುರುದ್ದೇಶಪೂರಿತವಾದ ಭಯೋತ್ಪಾದನಾ ಕೃತ್ಯವೇ ಆಗಿತ್ತು ಎಂಬುದು ತಿಳಿದು ಬಂದಿದೆ. ಕೇಂದ್ರ ಸಚಿವರಾದ ರವ್ನೀತ್ ಸಿಂಗ್ ಅವರು ಈ ಬಗ್ಗೆ ತಮ್ಮ ಅಧಿಕೃತ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ‘ಇತ್ತೀಚೆಗೆ ನಡೆದ ಕೆಲವು ರೈಲ್ವೆ ಅಪಘಾತಗಳು ದುರುದ್ದೇಶಪೂರಿತವಾಗಿದ್ದವು ಮತ್ತು ಅವುಗಳಲ್ಲಿ ವಿದೇಶಿಗರ ಹುನ್ನಾರ, ಕೈವಾಡವಿತ್ತು’ ಎಂದು ಸುಸ್ಪಷ್ಟವಾಗಿ ನುಡಿದಿದ್ದರು.

ರೈಲ್ವೇ ಜಿಹಾದ್ : ದೇಶದ ಹಲವೆಡೆ ‘ರೈಲ್ ಜಿಹಾದ್’ ನಡೆದಿದೆ ಎಂಬ ದೊಡ್ಡ ಖಂಡನೆ ವ್ಯಕ್ತವಾಗುತ್ತಿದೆ. ರೈಲ್ವೆಹಳಿಗಳ ಮೇಲೆ ದೊಡ್ಡ ಗಾತ್ರದ ವಸ್ತುಗಳನ್ನು ಅಡ್ಡಲಾಗಿ ಬೇಕಂತಲೇ ಇರಿಸಿ ಅನಾಹುತಗಳು ಸಂಭವಿಸುವಂತೆ ಮಾಡಲಾಗುತ್ತಿದೆ ಎಂಬ ಆಕ್ರೋಶ ದೇಶಾದ್ಯಂತ ವ್ಯಕ್ತವಾಗುತ್ತಿದೆ. ಕೆಲ ಮೂಲಭೂತವಾದ ಭಯೋತ್ಪಾದಕ ಚಟುವಟಿಕೆಗಳ ಭಾಗವೇ ಇದು ಸಹ ಎಂದು ಜನರು ಹೌಹಾರುತ್ತಿದ್ದಾರೆ.

ರೈಲ್ ಜಿಹಾದ್ ನಡೆಯುತ್ತಿದೆ ಎಂಬುದಕ್ಕೆ ಬಲವಾದ ಕೆಲವು ನಿದರ್ಶನಗಳನ್ನು ಕೊಡುವುದಾದರೆ:

  1. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಅಡಚಣೆ:
    ಆಗಸ್ಟ್ ತಿಂಗಳ 2024ರಂದು ರಾಜಸ್ಥಾನ ರಾಜ್ಯದ ಪಾಲಿ ಎಂಬಲ್ಲಿ ವಂದೇ ಭಾರತ್ ರೈಲಿಗೆ ಸಾಗುವ ಹಳಿಯ ಮೇಲೆ ಅಡ್ಡಲಾಗಿ ಸಿಮೆಂಟ್ ಬ್ಲಾಕ್ ಗಳನ್ನು ಇರಿಸಿ, ಕಿಡಿಗೇಡಿಗಳು ರೈಲಿನ ಅಪಘಾತ ಆಗುವಂತೆ ಯತ್ನಿಸಿದ್ದರು.

2.ಸಬರಮತಿ ಎಕ್ಸ್ ಪ್ರೆಸ್ ಅಪಘಾತದ ಘಟನೆ:
ಸಬರಮತಿ ಎಕ್ಸ್ ಪ್ರೆಸ್ ರೈಲು ಆಗಸ್ಟ್ 2024ರಂದು ಕಾನ್ಪುರದ ಗೋವಿಂದ್ ಪುರಿ ರೈಲ್ವೆ ಸ್ಟೇಷನ್ ಬಳಿ ಹಳಿಗಳ ಮೇಲೆ ಕಿಡಿಗೇಡಿಗಳು ಮುರಿದ ಹಳಿಗಳನ್ನು ಇರಿಸಿದ್ದರಿಂದ ಹಳಿತಪ್ಪಿ ಅಪಘಾತಕ್ಕೆ ಈಡಾಗಿತ್ತು.

3.ಕಲಿಂಡಿ ಎಕ್ಸ್ ಪ್ರೆಸ್ ರೈಲ್ ಸ್ಫೋಟ ಪ್ರಕರಣ : ಕಲಿಂಡಿ ಎಕ್ಸ್ ಪ್ರೆಸ್ ರೈಲು ಕಾನ್ಪುರದ ಮುಂಡೇರಿ ಕ್ರಾಸಿಂಗ್ ಬಳಿ ಸೆಪ್ಟೆಂಬರ್ 2024ರಲ್ಲಿ ಹಳಿಯಲ್ಲಿ ಕಿಡಿಗೇಡಿ ಜಿಹಾದಿಗಳು ಇರಿಸಿದ್ದ ತುಂಬಿದ್ದ ಅಡುಗೆ ಅನಿಲಕ್ಕೆ ಬಡಿದು ದೊಡ್ಡ ಮಟ್ಟದ ಸ್ಫೋಟದ ಸದ್ದು ಕೇಳಿ ಬಂದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿರಲಿಲ್ಲ. ಆದರೆ ಸಮೀಪವೇ ಸ್ಪೋಟಕಗಳಿಗೆ ಸಂಬಂಧಿಸಿದ ರಸಾಯನಿಕಗಳು ಹಾಗು ಪೆಟ್ರೋಲ್ ತುಂಬಿದ್ದ ಬಾಟಲಿ,ಬತ್ತಿ ಕಂಡು ಬಂದು ತೀವ್ರ ಆತಂಕ ಸೃಷ್ಟಿಸಿತ್ತು.

ಇತರೆ ಘಟನೆಗಳು :

1.ಇತ್ತೀಚೆಗೆ ರಾಜಸ್ಥಾನದ ಬಾರನ್ ನಲ್ಲಿ ರೈಲಿನ ಹಳಿಯ ಮೇಲೆ ಮೋಟರ್ ಬೈಕ್ ನ ಬಿಡಿಭಾಗಗಳನ್ನು ಇರಿಸಿ, ಅಪಘಾತಗಳು ಆಗಲು ಉಗ್ರವಾದಿ ಮನಸ್ಥತಿಗಳು ಯತ್ನಿಸಿದ್ದವು‌.

2.ಆಲಿಘಢದಲ್ಲಿ ರೈಲಿನ ಹಳಿಯ ಮೇಲೆ ಬೈಕಿನ ಅಲಾಯ್ ಅನ್ನು ಇರಿಸಿದಕ್ಕಾಗಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿತ್ತು.
3.ಫಾರೂಕಾಬಾದ್ ಎಕ್ಸ್ ಪ್ರೆಸ್ ರೈಲಿಗೆ ಹಳಿಯ ಮೇಲೆ ಅಡ್ಡಲಾಗಿ ದೊಡ್ಡ ಗಾತ್ರದ ಮರದ ತುಂಡನ್ನು ಇರಿಸಿ, ಅಪಘಾತಕ್ಕೆ ಪ್ರಯತ್ನಿಸಲಾಗಿತ್ತು.

ಈ ರೀತಿ ಮೇಲಿಂದ ಮೇಲೆ ದೇಶದಲ್ಲಿ ಆತಂಕಕಾರಿ ಬೆಳವಣಿಗೆಗಳು ಇಸ್ಲಾಂ ಮೂಲಭೂತವಾದಿಗಳಿಂದ ನಡೆಯುತ್ತಿರುವುದು ಭಾರತೀಯ ರೈಲ್ವೆ ಇಲಾಖೆಯ ತಲೆ ನೋವಿಗೆ ಕಾರಣವಾಗಿದೆ. ಈ ರೀತಿಯ ಅಪಾಯಗಳನ್ನು ತಡೆಯಲು ಸುಧಾರಣಾ ಕ್ರಮಗಳಿಗೆ ಮುಂದಾಗಿದೆ.

ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ‘ರೈಲ್ ಜಿಹಾದ್’ ಕುಕೃತ್ಯಗಳನ್ನು ತೀವ್ರವಾಗಿ ಖಂಡಿಸಿದ್ದು, ಇಂತಹ ಸವಾಲನ್ನು ಸಮರ್ಥವಾಗಿ ಎದುರಿಸುವ ದಿಟ್ಟತೆ ತೋರಿದ್ದಾರೆ.

ರೈಲ್ ಜಿಹಾದ್ ತಡೆಯಲು ಈಗಾಗಲೇ ತೆಗೆದುಕೊಂಡಿರುವ ಕ್ರಮಗಳನ್ನು ಗಮನಿಸುವುದಾದರೆ :

ಸಿಸಿಟಿವಿಗಳ ಅಳವಡಿಕೆ : ಪ್ರಮುಖ ರೈಲ್ವೆ ಸ್ಟೇಷನ್ ಗಳಲ್ಲಿ ಹಾಗು ರೈಲಿನ ಒಳಗೆ ನಡೆಯುವ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಸಿಸಿಟಿವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲಾಗಿದೆ.

ಡ್ರೋಣ್ ಗಳ ಗಸ್ತು : ನಿರ್ಜನ ಹಾಗು ದೂರದ ರೈಲ್ವೆ ಹಳಿಗಳ ದಾರಿಯ ಉದ್ದಕ್ಕೂ ಗಮನ ಇಡಲೆಂದು ಡ್ರೋಣ್ ಗಳನ್ನು ಗಸ್ತು ಹೊಡೆಸಲಾಗುತ್ತಿದೆ.

ನಿರಂತರ ಗಸ್ತು : ರೈಲ್ವೆ ಪ್ರೊಟೆಕ್ಷ‌ನ್ ಪೋಸ್೯ ಹಾಗು ಗವರ್ನಮೆಂಟ್ ರೈಲ್ವೆ ಪೊಲೀಸ್ ರೈಲ್ವೆ ಸ್ಟೇಷನ್ ನ ಹಳಿಗಳ ಬಳಿ ನಿರಂತರ ಗಸ್ತು ಹೊಡೆಯಲು ನಿಯೋಜಿಸಲಾಗಿದೆ.

ಸ್ವಯಂ ಚಾಲಿತವಾಗಿ ಎಚ್ಚರಿಕೆ ನೀಡುವ ವ್ಯವಸ್ಥೆ : ಸ್ವಯಂ ಚಾಲಿತ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಿದ್ದು, ಇದು ಅಪಾಯ ಸಂಭವಿಸುವ ಮುನ್ನವೇ ಮುನ್ಸೂಚನೆಯನ್ನು ಅಧಿಕಾರಿಗಳಿಗೆ ನೀಡುತ್ತದೆ. ಆ ಮೂಲಕ ಪ್ರಯಾಣಿಕರ ಜೀವವನ್ನು ಉಳಿಸುತ್ತದೆ.

ಹಳಿ ತಪಾಸಣಾ ವ್ಯವಸ್ಥೆ :‌ ಹಳಿಗಳ ತಪಾಸಣಾ ವ್ಯವಸ್ಥೆಗೆ ಸಬಲ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಇದು ಹಳಿಗೆ ಅಡ್ಡಲಾಗಿ ಯಾವುದೇ ಅಡಚಣೆ, ಅಪಾಯ ತೊಂದರೆ ಎದುರಾಗುವುದಿದ್ದರೆ ಅದನ್ನು ಗುರುತಿಸಿ ಮಾಹಿತಿಯನ್ನು ರವಾನಿಸುವ ಕಸುವು ಹೊಂದಿದೆ.

ಸಾರ್ವಜನಿಕರಿಗೆ ಜಾಗೃತಿ : ರೈಲ್ವೆ ಸುರಕ್ಷತೆ, ಸುಭದ್ರತೆಯ ಪ್ರಾಮುಖ್ಯತೆ ಮತ್ತು ಸಾರ್ವಜನಿಕರ ಸ್ವತ್ತುಗಳ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಸಾರ್ವಜನಿಕರಿಗೆ ರೈಲ್ವೆ ಸಂಪರ್ಕದಲ್ಲಿ ಏನಾದರೂ ದೋಷ ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಸ್ಥಳೀಯರ ಸಹಕಾರಕ್ಕೆ ಮನವಿ : ರೈಲ್ವೆ ಸಂಪರ್ಕ ಒದಗಿಸುವ ಪ್ರಯಾಣದ ಹಾದಿ ಉದ್ದಕ್ಕೂ ನೆರೆಹೊರೆಯಲ್ಲಿ ವಾಸಿಸುವವರ ವಿಶ್ವಾಸ ಪಡೆದು, ಅವರೇ ರೈಲ್ವೆ ಹಳಿಗಳ ಸುರಕ್ಷತೆಗೆ ಕಣ್ಣು ಕಿವಿಗಳಾಗಿ ನಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

ಎಜೆನ್ಸಿಗಳ ಸಹಕಾರ-ಸಂಪರ್ಕ : ಗುಪ್ತಚರ ಇಲಾಖೆ, ರಾಜ್ಯ ಪೊಲೀಸ್, ರೈಲ್ವೆ ಪ್ರೊಟೆಕ್ಷನ್ ಫೋಸ್೯ಗಳ ನಡುವೆ ಅಂತರ್ ಸಹಕಾರ ಹಾಗು ಸಂಪರ್ಕ ಗಟ್ಟಿಗೊಳಿಸಲು ಒಟ್ಟಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ನಿರ್ಧರಿಸಲಾಗಿದೆ‌.‌

ಕಟ್ಟುನಿಟ್ಟಿನ ಕ್ರಮ ಹಾಗು ಶಿಕ್ಷಾರ್ಹ ದಂಡ ವಿಧಿತ : ರೈಲ್ವೆ ಸಂಪರ್ಕಗಳಿಗೆ ಅಡಚಣೆ ಉಂಟು ಮಾಡಿ ಕಂಟಕ ತಂದೊಡ್ಡುವ ಸಮಾಜಘಾತುಕರ ವಿರುದ್ಧ ಕಠಿಣವಾದ ಕಟ್ಟು ನಿಟ್ಟಿನ ಕ್ರಮ ಹಾಗು ಶಿಕ್ಷಾರ್ಹ ಮೊತ್ತದ ದಂಡವನ್ನು ವಿಧಿಸಲಾಗುತ್ತಿದೆ.

ಬೇಲಿ ಹಾಗು ಅಡ್ಡಗೋಡೆಗಳ ನಿರ್ಮಾಣ : ರೈಲ್ವೆ ಹಳಿಗಳು ಸಾಗುವ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಅನಧಿಕೃತ ಪ್ರವೇಶಗಳನ್ನು ನಿರ್ಬಂಧಿಸಲು ಬೇಲಿ ಹಾಗು ಅಡ್ಡ ಗೋಡೆಗಳ ನಿರ್ಮಾಣ ಮಾಡಲಾಗಿದೆ.

ಸಿಗ್ನಲ್ ವ್ಯವಸ್ಥೆಯ ಉನ್ನತೀಕರಣ : ಸಿಗ್ನಲ್ ವ್ಯವಸ್ಥೆಯ ಉನ್ನತೀಕರಣ ಮಾಡಿ, ಉತ್ತಮ ನಿಯಂತ್ರಣ ಹಾಗು ರೈಲುಗಳ ಸಾಗುವಿಕೆಯ ಪರಿಣಾಮಕಾರಿ ವೀಕ್ಷಣೆ ಹಾಗು ಗಮನಿಸುವಿಕೆಯನ್ನು ಇಲಾಖೆ ಮಾಡಲಾಗುತ್ತಿದೆ.

ಭಾರತವನ್ನು ವಿಕಸಿತವಾಗಿಸಿ ಭವಿಷ್ಯತ್ತಿನಲ್ಲಿ ಭರವಸೆಯ ವಿಶ್ವಗುರು ಮಾಡಲು ಎಲ್ಲಾ ರೀತಿಯಲ್ಲೂ ಕೇಂದ್ರದ ಎನ್.ಡಿ.ಎ ಸರಕಾರ ಪರಿಶ್ರಮ ಪಡುತ್ತಿದೆ‌. ‘ರೈಲ್ ಜಿಹಾದ್’ ಅಂತಹ ಕೋಮುವಾದಿ ಭಯೋತ್ಪಾದಕ ಕೃತ್ಯಗಳನ್ನು ಎಸಗುವರನ್ನು ಬಗ್ಗು ಬಡಿದು ಇಂತಹ ತಪ್ಪು ಅವರಿಂದ ಇನ್ನೆಂದೂ ಆಗದಂತಹ ಪಾಠವನ್ನು ಕಲಿಸಬೇಕು. ನೆಲದ ಕಾನೂನು ಗಟ್ಟಿಯಾದರೆ ಮಾತ್ರ ಇಂತಹ ಕಂಟಕಗಳಿಗೆ ಖಡಕ್ ಆದ ಉತ್ತರ ನೀಡಲು ಸಾಧ್ಯವಾಗುತ್ತದೆ.

ರಜತ್ ರಾಜ್ ಡಿ.ಹೆಚ್
( ಪತ್ರಕರ್ತರು, ಮಡಿಕೇರಿ )

Advertisement
error: Content is protected !!