ಅಪಘಾತವಾಗಿದ್ದು ಪ್ರತಾಪ್ ಸಿಂಹ ಕಾರಲ್ಲ
ಬೆಂಗಳೂರು : ಕಳೆದ ಒಂದು ಗಂಟೆ ಹಿಂದೆ ಸಂಸದ ಪ್ರತಾಪ್ ಸಿಂಹ ಕಾರು ಅಪಘಾತವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಕುರಿತು ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದು ಬೇರೆಯವರ ಕಾರು ಅಪಘಾತವಾಗಿದ್ದು ಸಹಾಯಕ್ಕೆ ನಾನು ಧಾವಿಸಿದ್ದೇ ಎಂದು ಹೇಳಿದ್ದಾರೆ.
ಈ ಕುರಿತು ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದು ಬೆಂಗಳೂರಿನಿಂದ ಮೈಸೂರಿಗೆ ಹೊಗುವ ಸಂದರ್ಭದಲ್ಲಿ ಮದ್ದೂರಿನ ವೈಶಾಲಿ ಹೋಟೆಲ್ ನಲ್ಲಿ ಊಟಕ್ಕೆ ನಿಂತಾಗ ಬೇರೆಯಿಬ್ಬರ ಕಾರು ಅಪಘಾತವಾಗಿತ್ತು. ಸ್ಥಳಕ್ಕೆ ಹೋಗಿ ಅಪಘಾತ ಆದವರನ್ನು ರಕ್ಷಣೆ ಮಾಡಿದ್ದಾಗಿ ಫೇಸ್ಬುಕ್ ಲೈವ್ ನಲ್ಲಿ ತಿಳಿಸಿದ್ದಾರೆ.
ಪ್ರತಾಪ್ ಸಿಂಹ ಹೇಳಿದ ವೀಡಿಯೋ : https://www.facebook.com/MPPratapSimha/videos/603580367646919/