
ನೇಹಾ ಹಿರೇಮಠ ಕೊಲೆಗೆ ಅಸಲಿ ಕಾರಣ ಏನು ಗೊತ್ತಾ…? ಪೊಲೀಸ್ ತನಿಖೆಯಿಂದ ಬಹಿರಂಗಗೊಂಡ ಸತ್ಯ…!

ಹುಬ್ಬಳ್ಳಿ : ಮಹಾನಗರ ಪಾಲಿಕೆ ಕಾರ್ಪೋರೆಟರ್ ನಿರಂಜನ ಹಿರೇಮಠ ಪುತ್ರಿ ನೇಹಾ ಹಿರೇಮಠ ಕೊಲೆ ಪ್ರಕರಣದ ಅಸಲಿ ಕಾರಣ ಏನು ಎಂಬ ಪ್ರಶ್ನೆ ಜನರಲ್ಲಿ ಮೂಡಿತ್ತು. ಸಧ್ಯ ಪೊಲೀಸ್ ತನಿಖೆಯಿಂದ ಕೆಲವು ಮಾಹಿತಿ ಬಹಿರಂಗಗೊಂಡಿವೆ.
ಈಗಾಗಲೇ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು ಪೊಲೀಸರು 483 ಪುಟಗಳ ಚಾರ್ಜಶೀಟ್ ಸಲ್ಲಿಕೆ ಮಾಡಿದ್ದು, ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಗೂ ಹಂತಕ ಫಯಾಜ್ ಕುರಿತು ಸಮಗ್ರ ವಿಷಯಗಳ ತನಿಖೆ ಕೈಗೊಂಡು ವರದಿ ಸಲ್ಲಿಸಿದ್ದಾರೆ.
ಹುಬ್ಬಳ್ಳಿ ನಗರದ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಓದುತಿದ್ದ ನೇಹಾ ಹಿರೇಮಠ ಮಧ್ಯಾಹ್ನ ಪರೀಕ್ಷೆ ಬರೆದು ಕ್ಯಾಂಪಸ್ ಹೊರಗೆ ಬರುತ್ತಿದ್ದಂತೆ ಆರೋಪಿ ಫಯಾಜ್ ಚಾಕುವಿನಿಂದ ಅನೇಕಬಾರಿ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ.
ಈ ಪ್ರಕರಣ ಕುರಿತು ತನಿಖೆ ನಡೆಸಿದ್ದ ಪೊಲೀಸ್ ಸಿಐಡಿ ಅಧಿಕಾರಿಗಳು ಕೊಟ್ಟ ವರದಿಯಲ್ಲಿ ಅನೇಕ ವಿಷಯಗಳು ಅಡಗಿವೆ. ಆರೋಪಿ ಫಯಾಜ್ ನೇಹಾ ಕೊಲೆ ಮಾಡಿದ್ದಕ್ಕೆ ಸುಮಾರು 99 ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ನೇಹಾ ಕೊಲೆಗೆ ಪ್ರಮುಖ ಕಾರಣ ಇಬ್ಬರು ಪ್ರೀತಿ ಮಾಡುತ್ತಿದ್ದರು. ಕೆಲ ದಿನಗಳಿಂದ ನೇಹಾ ಫಯಾಜ್ ನನ್ನು ದೂರ ಮಾಡಲು ಪ್ರಾರಂಭಿಸಿದ್ದಳು. ಫಯಾಜ್ ಮದುವೆ ಆಗುವಂತೆ ಕೇಳಿದ್ದಕ್ಕೆ ನೇಹಾ ಫಯಾಜ್ ನನ್ನು ದೂರ ಮಾಡಿದ್ದಳು. ಇದರಿಂದ ಫಯಾಜ್ ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ.
ನೇಹಾ ಕೊಲೆ ಮಾಡುವ ಮೊದಲು ಹಂತಕ ಫಯಾಜ್. ಕೆಂಪು ಬಣ್ಣದ ಪೋಟಿ, ಒಂದು ಚಾಕು ಖರೀದಿ ಮಾಡಿದ್ದ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಪ್ರೀತಿ ವಿಷಯಕ್ಕೆ ಅಮಾಯಕಿ ಜೀವ ಹೋಗಿದ್ದು ವಿಪರ್ಯಾಸವೇ ಸರಿ.