Select Page

Advertisement

ಪೊಲೀಸ್ ಅಧಿಕಾರಿಗಳ ಮೂಲಕ ವೈರಲ್ ಆಯ್ತಾ ನೇಹಾ ಹಿರೇಮಠ ಚಿತ್ರಗಳು…?

ಪೊಲೀಸ್ ಅಧಿಕಾರಿಗಳ ಮೂಲಕ ವೈರಲ್ ಆಯ್ತಾ ನೇಹಾ ಹಿರೇಮಠ ಚಿತ್ರಗಳು…?

ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಕೊಲೆ ಮಾಡಿದ ಆರೋಪಿ ಫಯಾಜ್ ಮೊಬೈಲ್’ನಲ್ಲಿದ್ದ ಫೋಟೊಗಳನ್ನು ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿಸುತ್ತಿದೆ ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದ್ದಾರೆ.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೇಹಾಳನ್ನು ಕೊಲೆ ಮಾಡಿದ ನಂತರ ಆರೋಪಿಯ ಮೊಬೈಲ್‌ ಪೊಲೀಸರ ಬಳಿಯಿತ್ತು.

ಈಗ ಆ ಮೊಬೈಲ್’ನಲ್ಲಿದ್ದ ಫೋಟೊಗಳನ್ನು ಹಂಚಿಕೆ ಮಾಡುವ ಮೂಲಕ, ಅವಳ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಯತ್ನ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣದ ಕುರಿತು ರಾಜ್ಯ ಸರ್ಕಾರ ಈವರೆಗೂ ಯಾವುದೇ ಸ್ಪಷ್ಟತೆ ನೀಡಿಲ್ಲ. ಒಂದು ಕಡೆ ಗೃಹ ಸಚಿವರು ಆಕಸ್ಮಿಕ ಎನ್ನುತ್ತಾರೆ, ಇನ್ನೊಂದೆಡೆ ಮುಖ್ಯಮಂತ್ರಿ ವೈಯಕ್ತಿಕ ಎಂದು ಹೇಳಿಕೆ ನೀಡುತ್ತಾರೆ. ಅವಳ ಕುಟುಂಬಕ್ಕೆ ಸಾಂತ್ವನ ಹೇಳುವುದನ್ನು ಬಿಟ್ಟು, ಇನ್ನಷ್ಟು ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸೌಜನ್ಯಕ್ಕಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಹಾ ಮನೆಗೆ ಬಂದು ಕುಟುಂಬದವರಿಗೆ ಸಾಂತ್ವನ ಹೇಳಬಹುದಿತ್ತು. ಅದೇ ಮುಸ್ಲಿಂ ಸಮುದಾಯದವರಿಗೆ ಹೀಗೆ ಆಗಿದ್ದರೆ ಮೊದಲು ಬರುತ್ತಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Leave a reply

Your email address will not be published. Required fields are marked *

error: Content is protected !!