ಇವರೇ ನೋಡಿ ದೇಶದ ಪ್ರಧಾನಿ ಸ್ವಾಗತಕ್ಕೆ ಸಜ್ಜಾದ ವಿಶೇಷ ವ್ಯಕ್ತಿಗಳು
ಬೆಳಗಾವಿ : ಕುಂದಾನಗರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿಷ್ಟಾಚಾರದ ಅಡಿಯಲ್ಲಿ ವಿಭಿನ್ನವಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ದಿನಗೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಸಾಮಾನ್ಯ ಕಾರ್ಮಿಕರು ದೇಶದ ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ.
ಆಟೋ ಚಾಲಕ ಮಯೂರ ಚೌಹಾನ್, ಪೌರ ಕಾರ್ಮಿಕ ಮೀನಾಕ್ಷಿ ತಳವಾರ, ಕೂಲಿ ಕಾರ್ಮಿಕ ಮಂಗೇಶ ಬಸ್ತವಾಡಕರ್, ರೈತ ಮಹಿಳೆ ಶೀಲಾ ಖನ್ನುಕರ್, ನೇಕಾರರಾದ ಕಲ್ಲಪ್ಪ ಟೋಪಗಿ ಎಂಬುವವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತ ಮಾಡಲಿದ್ದಾರೆ. ಈಗಾಗಲೇ ಈ ಐವರಿಗೂ ಕೊವಿಡ್ ತಪಾಸನೆ ಕೂಡಾ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.