ಶರ್ಟ್ ಬಟನ್ ಹಾಕು ; ನಲಪಾಡ್ ಗೆ ಸುರ್ಜೆವಾಲಾ ಶಿಸ್ತಿನ ಪಾಠ
ಬೆಳಗಾವಿ : ಗಾಂಧಿ ಭಾರತ ಕಾರ್ಯಕ್ರಮ ಸಿದ್ಧತೆ ಕುರಿತು ಬೆಳಗಾವಿ ನಗರದ ಸಿಪಿಎಡ್ ಮೈದಾನಕ್ಕೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ ಅವರಿಗೆ ಶಿಸ್ತಿನ ಪಾಠ ಮಾಡಿದರು.
ಶರ್ಟ್ ಬಟನ್ ಹಾಕದೆ ಹಾಗೆಯೇ ನಿಂತಿದ್ದ ನಲಪಾಡ್ ಅವರಿಗೆ ಕೈ ಸನ್ನೆ ಮೂಲಕ ಶರ್ಟ ನ ಕುತ್ತಿಗೆ ಬಟನ್ ಹಾಕುವಂತೆ ಹೇಳಿದರು. ತಕ್ಷಣಕ್ಕೆ ಶರ್ಟ್ ಸರಿಪಿಸಿಕೊಂಡ ನಲಪಾಡ ನಂತರ ಕಾರ್ಯಕ್ರಮದ ಸಿದ್ಧತೆ ಕುರಿತು ವಿವರಣೆ ನೀಡಿದ ಪ್ರಸಂಗ ನಡೆಯಿತು.
ಡಿಸೆಂಬರ್ 26 ಹಾಗೂ 27 ರಂದು ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಹಿನ್ನಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ದೇಶದಾದ್ಯಂತ ಅನೇಕ ನಾಯಕರು ಭಾಗವಹಿಸಲಿದ್ದಾರೆ.


