ಬೆಳಗಾವಿ : ಕೆಲ ಭಾಗಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ – ಡಿಸಿ ನಿತೇಶ್ ಪಾಟೀಲ್ ಆದೇಶ
ಬೆಳಗಾವಿ : ಜೂನ್. 4 ರ ಮಂಗಳವಾರ ನಡೆಯಲಿರುವ ಲೋಕಸಭಾ ಚುನಾವಣಾ ಮತ ಎಣಿಕೆ ಹಿನ್ನಲೆಯಲ್ಲಿ ನಗರದ ಕೆಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ನಗರದ ತಿಲಕವಾಡಿಯಲ್ಲಿರುವ ಆರ್ ಪಿ ಡಿ ಕಾಲೇಜಿನಲ್ಲಿ ಚುನಾವಣಾ ಮತ ಎಣಿಕೆ ನಡೆಯಲಿದ್ದು ಈ ಹಿನ್ನಲೆಯಲ್ಲಿ ಎಣಿಕೆ ಕೇಂದ್ರದ ಸುತ್ತಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಎಸ್ಕೆಇ ಭಂಡಾರಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆ, ಡಿವೈನ್ ಪ್ರೊವಿಡೆನ್ಸ್ ಆಂಗ್ಲ ಮಾಧ್ಯಮ ಶಾಲೆ, ಗೋಮಟೇಶ್, ಕೆಎಲ್ಎಸ್ ಕಾಲೇಜು ಸೇರಿದಂತೆ ಇನ್ನೀತರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.