ಬೆಳಗಾವಿ ವಾಯ್ಸ್ ವರದಿ ಫಲಶೃತಿ : ಪಿಡಿಒ ಗೆ ಶೋಕಾಸ್ ನೋಟಿಸ್ ಜಾರಿ
ಸವದತ್ತಿ : ಯರಗಟ್ಟಿ ತಾಲೂಕಿನ ಮಾಡಮಗೇರಿ ಗ್ರಾಮ ಪಂಚಾಯತಿ ಸದಸ್ಯರ 14 ತಿಂಗಳ ಗೌರವಧನ ದುರ್ಬಳಕೆ ಮಾಡಿಕೊಂಡ ಆರೋಪ ಹೊತ್ತ ಪಿಡಿಒ ವಿರುದ್ಧ ಬೆಳಗಾವಿ ವಾಯ್ಸ್ ವರದಿ ಬೆನ್ನಲ್ಲೇ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಮಾಡಮಗೇರಿ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಕಳೆದ 2021 ರಿಂದ 25 ವರೆಗೆ ಗ್ರಾಮ ಪಂಚಾಯತಿ ಸದಸ್ಯರಿಗೆ 16 ಲಕ್ಷ ರೂ. ಬಿಡುಗಡೆಯಾಗಿತ್ತು. ಇದರಲ್ಲಿ ಸದಸ್ಯರಿಗೆ ಕೇವಲ 10 ಲಕ್ಷ ರೂ. ಗೌರವಧನ ಮಾತ್ರ ಬಿಡುಗಡೆ ಮಾಡಿದ್ದು, ಖಾತೆಯಲ್ಲಿ ಕೇವಲ 2 ಲಕ್ಷ ರೂ. ಹಣ ಉಳಿಸಿದ್ದು ಉಳಿದ ಮೂರು ಲಕ್ಷ ರೂ.ಗಳ ವ್ಯತ್ಯಾಸ ಕಂಡುಬಂದಿತ್ತು.
ಈ ಪ್ರಕರಣ ಕುರಿತು ಸವದತ್ತಿ ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿಗಳು ಹಾಗೂ ವಿಷಯ ನಿರ್ವಾಹಕರು ತನಿಖೆ ನಡಿಸುವ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ವರದ ನೀಡಿದ್ದರು. ವರದಿ ಹಿನ್ನಲೆಯಲ್ಲಿ ಲಕ್ಷಾಂತರ ಹಣ ದುರ್ಬಳಕೆ ಆರೋಪದ ಕುರಿತು ಮಾಡಮಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯಲ್ಲವ್ವ ಶೇರಿ ವಿರುದ್ಧ ಕ್ರಮಕ್ಕೆ ಶಿಪಾರಸ್ಸು ಮಾಡಲಾಗಿತ್ತು.
ಸಧ್ಯ ಪಿಡಿಒಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಶೋಕಾಸ್ ನೋಟಿಸ್ ನೀಡಲಾಗಿದ್ದು ಏಳು ದಿನಗಳಲ್ಲಿ ಉತ್ತರಿಸುವಂತೆ ತಿಳಿಸಿಲಾಗಿದೆ. ಜೊತೆಗೆ ಸವದತ್ತಿ ತಾಲೂಕಿನಲ್ಲಿ ಕೆಲವರು ಅಧಿಕಾರ ದುರ್ಭಳಕೆ ಮಾಡಿಕೊಂಡು ಅನಧಿಕೃತ ಬಡಾವಣೆಗೆ ಅನುಮತಿ ಹಾಗೂ ಲಕ್ಷಾಂತರ ರೂ. ಭ್ರಷ್ಟಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು ಈ ಕುರಿತು ಬೆಳಗಾವಿ ವಾಯ್ಸ್ ಸಮಗ್ರ ವರದಿ ಪ್ರಕಟಿಸಲಿದೆ.
ಸವದತ್ತಿ : ಭ್ರಷ್ಟಾಚಾರ ಆರೋಪ ಹೊತ್ತ ಪಿಡಿಒ ವಿರುದ್ಧ ಕ್ರಮ ಯಾಕಿಲ್ಲ..!


