ಚಿಕ್ಕೋಡಿ : ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಕಳೆದ ಎರಡು‌, ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದ ಸಿದ್ದೇಶ್ವರ ಕೆರೆಯ ಹತ್ತಿರವಿರುವ ನಿತಿನ ಜಠಾ‌ರ ಅವರ ಮನೆ ಹಿಂಬದಿಯ ಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯವಾಗಿದೆ.

ಮಾಧುರಿ ನಿತಿನ ಜಟಾರ ಇವರು ಗೋಡೆ ಪಕ್ಕಕ್ಕೆ ಕುಳಿತು ಪಾತ್ರೆ ತೊಳೆಯುತ್ತಿರುವಾಗ ಅನಿರೀಕ್ಷಿತವಾಗಿ ಗೋಡೆ ಕುಸಿದಿದ್ದರಿಂದ ಗೋಡೆಯ ಜೊತೆಗೆ ಪಾಳು ಬಿದ್ದ ಬಾವಿಗೆ ಮಹಿಳೆ ಕುಸಿದು ಬಿದ್ದಿದ್ದರಿಂದ ಗಾಯಗೊಂಡಿದ್ದಾಳೆ.

ಘಟನೆ ಸಂಭವಿಸುತಿದ್ದಂತೆ ಪಕ್ಕದ ಮನೆಯವರಿಗೆ ಗೊತ್ತಾಗುತ್ತಿದ್ದಂತೆ ಪರಿಸರದ ಜನರು ಕೂಡಿ ಬಾವಿಗೆ ಬಿದ್ದ ಮಹಿಳೆಯನ್ನು ಹೊರತೆಗೆದಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಮಹಿಳೆಯ ಕೈಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ನಿತಿನ್ ಜಟಾರ್ ಅವರ ಮನೆಯಲ್ಲಿಯ ಜೀವನಾವಸ್ಯಕ ವಸ್ತುಗಳು ಹಾನಿಯಾಗಿವೆ.