ಬೆಳಗಾವಿ : ಮಂಗಳವಾರ ಬೆಳಗಾವಿಯಲ್ಲಿ‌ ನಡೆಯಲಿರುವ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ಹಿನ್ನಲೆಯಲ್ಲಿ ಬೆಳಗಾವಿಯ ಈ ಭಾಗದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ದಿನಾಂಕ, 21.01.2025 ರಂದು ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಅನಾವರಣ ಸಮಾರಂಭ ಜರಗುವ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕು (ಗ್ರಾಮೀಣ ಮತ್ತು ನಗರ) ಶೈಕ್ಷಣಿಕ ವಲಯದ

ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಹಾಗೂ ಬೆಳಗಾವಿ ತಾಲೂಕಿನ ನಗರ ಯೋಜನೆ ಹಾಗೂ ಗ್ರಾಮೀಣ ಯೋಜನೆಯ

ಎಲ್ಲಾ ಅಂಗನವಾಡಿಗಳಿಗೆ ದಿನಾಂಕ:21.01.2025 ರಂದು ರಜೆ ಘೋಷಿಸಿದ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಹೊರಡಿಸಿದ್ದಾರೆ.