ಬೆಳಗಾವಿ : ಕಳೆದ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಮದ್ಯಪಾನ ಮಾಡಿದವರಿಗೆ ಆ್ಯಂಬ್ಯೂಲೆನ್ಸ್ ವ್ಯವಸ್ಥೆ ನೀಡುವಂತೆ ಆಗ್ರಹಿಸಿ ಬೆಳಗಾವಿ ಅಧಿವೇಶನ ವೇಳೆ ನಾವು ಧ್ವನಿ ಎತ್ತಿದ್ದರೂ ಸರ್ಕಾರ ಈವರೆಗೂ ಬೇಡಿಕೆ ಈಡೇರಿಸಿಲ್ಲ. ಆದರೆ ಮಧ್ಯಪ್ರದೇಶ ಸರ್ಕಾರ ಈ ಕುರಿತು ಮಹತ್ವದ ನಿರ್ಧಾರ ಕೈಗೊಂಡಿರುವುದು ಖುಷಿ ವಿಷಯ ಎಂದು ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಬೇಲೂರು ಘಟಕದ ಅಧ್ಯಕ್ಷ ತೋಟೇಶ್ ತಗರೆ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು, ಕಳೆದ ಬೆಳಗಾವಿ ಚಳಿಗಾಲ ಅಧಿವೇಶನ ವೇಳೆ ಮದ್ಯಪ್ರಿಯರ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಂಘಟನೆ ಪ್ರತಿಭಟನೆ ನಡೆಸಿತ್ತು. ಈ ವೇಳೆ ಮದ್ಯಪಾನ ಪ್ರಿಯರು ಕುಡಿದ ನಂತರ ಅವರಿಗೆ ಮನೆಗೆ ತೆರಳಲು ಸರ್ಕಾರ ವಾಹನ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆ ಇಡಲಾಗಿತ್ತು. ಆಗ ನಮ್ಮನ್ನು ನೋಡಿ ನಕ್ಕಿದ್ದರು. ಈಗ ನಮ್ಮ ಬೇಡಿಕೆ ಮಧ್ಯಪ್ರದೇಶ ಸರ್ಕಾರಕ್ಕೆ ಮುಟ್ಟಿದೆ ಎಂದರು.

ಮಧ್ಯಪ್ರದೇಶದಲ್ಲಿ ಸರ್ಕಾರವೇ ಮದ್ಯಪ್ರಿಯರ ಆರೋಗ್ಯ ತಪಾಸಣೆ ಮಾಡುತ್ತಿದೆ. ಅವರಿಗೆ ಕುಡಿದಾಗ ಆಗುವ ಸಮಸ್ಯೆ ಕುರಿತು ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ನಮ್ಮ ಬೇಡಿಕೆ ಮಧ್ಯಪ್ರದೇಶ ಸರ್ಕಾರಕ್ಕೆ ಮುಟ್ಟಿದ್ದು ರಾಜ್ಯ ಸರ್ಕಾರ ಕೂಡಲೇ ಕ್ರಮವಗಿಸುವಂತೆ ಆಗ್ರಹಿಸಿದ್ದಾರೆ.