ಯರಗಟ್ಟಿ : ತಾಲೂಕಿನ ಜೀವಾಪೂರ ಗ್ರಾಮದಲ್ಲಿ ಜೋಡಿ ಕೊಲೆ ಸಂಭವಿಸಿದ ಘಟನೆ ಬೆಳಕಿಗೆ ಬಂದಿದೆ.
ಯರಗಟ್ಟಿ ತಾಲೂಕಿನ ಜೀವಾಪೂರ ಗ್ರಾಮದಲ್ಲಿ ರಮೇಶ ಹನಮಂತ ನಾಯ್ಕರ(29) ಹಾಗೂ ಬಸವ್ವ ಭೀಮಪ್ಪ ನಾಯ್ಕರ (60) ಹತ್ಯೆ ಪ್ರಕರಣ ನಡೆದಿದೆ.
ಆಸ್ತಿ ವಿವಾದ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ಮುರಗೋಡ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




