ಬೆಳಗಾವಿ : ಪರಿಷತ್ ಕಣದಿಂದ ಹಿಂದೆ ಸರಿದ ಜಗದೀಶ್ ಕವಠಗಿಮಠ
ಬೆಳಗಾವಿ : ಪ್ರತಿಷ್ಠೆಯ ಪ್ರಶ್ನೆಯಾಗಿರುವ ಬೆಳಗಾವಿಯ ಸ್ಥಳೀಯ ಸಂಘ ಸಂಸ್ಥೆಗಳಿಂದ ಆಯ್ಕೆಯಾಗಲಿರುವ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನದಿಂದ ಪಕ್ಷೇತ್ರರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ, ಮಹಾಂತೇಶ ಕವಠಗಿಮಠ ಸಹೋದರ ಜಗದೀಶ್ ಕವಠಗಿಮಠ ನಾಮಪತ್ರ ವಾಪಸ್ ಪಡೆದಿದ್ದಾರೆ.
ಮಂಗಳವಾರ ನಾಮಪತ್ರ ಸಲ್ಲಿಸುವ ಕೊನೆ ದಿನದಂದು ಜಗದೀಶ್ ಕವಠಗಿಮಠ ನಾಮಪತ್ರ ಸಲ್ಲಿಸಿದ್ದರು. ಆದರೆ ಗುರುವಾರ ತಮ್ಮ ನಾಮಪತ್ರ ವಾಪಸ್ ಪಡೆದಿದ್ದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ನಿಂದ ಚನ್ನರಾಜ ಹಟ್ಟಿಹೊಳಿ, ಬಿಜೆಪಿಯಿಂದ ಮಹಾಂತೇಶ ಕವಠಗಿಮಠ, ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಕಣದಲ್ಲಿದ್ದು. ನಾಳೆ ಯಾವೆಲ್ಲ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯುತ್ತಾರೆ ಎಂದು ಕಾದು ನೋಡಬೇಕು