ಸಚಿವ ಗೋವಿಂದ ಕಾರಜೋಳ ಕಾರು ಅಪಘಾತ
ಬೆಂಗಳೂರು : ಸಚಿವ ಗೋವಿಂದ ಕಾರಜೋಳ ಪ್ರಯಾಣಿಸುತ್ತಿದ್ದ ಕಾರ್ ಅಪಘಾತವಾಗಿದ್ದು. ದ್ವಿಚಕ್ರವಾಹನಕ್ಕೆ ಸಚಿವರ ಕಾರ್ ಡಿಕ್ಕಿ ಹೊಡೆದಿದೆ.
ನೆಲಮಂಗಲ ತಾಲ್ಲೂಕಿನ ಕುಲವನಹಳ್ಳಿಯಲ್ಲಿ ಮಹಿಮಾಪುರ ಗೇಟ್ ಬಳಿ ಘಟನೆ ನಡೆದಿದೆ.
ಅಪಘಾತದಲ್ಲಿ ಬೈಕ್ ಸವಾರನ ಕಾಲು ಮುರಿದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ನಡೆದಿದೆ.
ಸಚಿವ ಗೋವಿಂದ ಕಾರಜೋಳ ಅವರು ತುಮಕೂರಿನಿಂದ ಬೆಂಗಳೂರಿಗೆ ಕಡೆಗೆ ತೆರಳುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ ಈ ಕುರಿತು ನೆಲಮಂಗಲ ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.