
ನರೇಂದ್ರ ಮೋದಿ ಸತ್ತರೆ ಮತ್ಯಾರು ಪ್ರಧಾನಿ ಆಗಲ್ವ : ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ ರಾಜು ಕಾಗೆ

ಬೆಳಗಾವಿ : ನಮಗೂ ಶಕ್ತಿ ಸಾಮರ್ಥ್ಯ ಇದೆ. ಮೋದಿ ಸತ್ತರೆ 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಮತ್ತೆ ಯಾರಿಗೂ ಪ್ರಧಾನಿ ಆಗುವ ಅರ್ಹತೆ ಇಲ್ಲವಾ ಎಂದು ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ನಾಲಿಗೆ ಹರಿಬಿಡ್ಟಿದ್ದಾರೆ.
ಕಾಗವಾಡ ತಾಲೂಕಿನ ಮದಭಾವಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ. ಮೋದಿ ಸತ್ತರೆ ಬೇರೆ ಯಾರಿಗೂ ಪ್ರಧಾನಿ ಆಗುವ ತಾಕತ್ತು ಇಲ್ಲವಾ. ಮೋದಿ ಮೂರು ಸಾವಿರ ಕೋಟಿ ರೂ ವಿಮಾನ ಹೊಂದಿದ್ದಾರೆ. ಐದು ಲಕ್ಷ ಮೌಲ್ಯದ ಸೂಟ್ ಧರಿಸುತ್ತಾರೆ ಎಂದರು.
ಈಗಿನ ಯುವಕರು ಮೋದಿ, ಮೋದಿ ಎನ್ನುತ್ತಾರೆ. ಮೋದಿಯನ್ನು ತಗೆದುಕೊಂಡು ಏನು ನೆಕ್ಕುತ್ತೀರಾ. ಇಲ್ಲಿ ಏನಾದರು ಆದರೆ ನಾವೇ ಬರುವುದು ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಇವರ ಹೇಳಿಕೆಗೆ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ.
ಶಾಸಕ ರಾಜು ಕಾಗೆ ಹೇಳಿಕೆಗೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ.
ಇಂತಹ ಕೀಳು ಮಟ್ಟದ ಹೇಳಿಕೆಯನ್ನು ಜನ ಯಾವತ್ತೂ ಕ್ಷಮಿಸಲ್ಲ. ಮತ್ತೊಮ್ಮೆ ಮೋದಿ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಗೆ ಮತ ಹಾಕದಿದ್ದರೆ ವಿದ್ಯುತ್ ಸ್ಥಗಿತ : ಕಾಗವಾಡ ಶಾಸಕ ರಾಜು ಕಾಗೆ ವಿವಾದಾತ್ಮಕ ಹೇಳಿಕೆ
ಅಥಣಿ : ಕಳೆದ ವಿಧಾನಸಭೆಯಲ್ಲಿ ಜುಗುಳ ಮತ್ತು ಮoಗಾವತಿ ಗ್ರಾಮಸ್ಥರು ನನಗೆ ನೀಡಿದ ಮತಗಳಿಗಿಂತ ಈ ಬಾರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ 400 ಮತಗಳನ್ನು ಅಧಿಕವಾಗಿ ನೀಡಬೇಕು.
ಒಂದು ವೇಳೆ ಕಡಿಮೆ ಮತಗಳು ಬಂದರೆ ಗ್ರಾಮಸ್ಥರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಹೇಳುವ ಮೂಲಕ ಕಾಗವಾಡ ಶಾಸಕ ರಾಜು ಕಾಗೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಅವರು ಕಾಗವಾಡ ತಾಲೂಕಿನ ಜುಗುಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಸತೀಶ್ ಜಾರಕಿಹೊಳಿ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿ ಕಳೆದ ವಿಧಾನಸಭೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜುಗುಳ ಗ್ರಾಮಸ್ಥರು
ಕಾಂಗ್ರೆಸ್ ಪಕ್ಷಕ್ಕೆ ಅಂದರೆ ನನಗೆ 400 ಮತಗಳನ್ನು ಕಡಿಮೆ ನೀಡಿದ್ದೀರಿ, ಈ ಬಾರಿ ನಮ್ಮ ಪಕ್ಷಕ್ಕೆ 400 ಮತಗಳನ್ನು ಅಧಿಕವಾಗಿ ನೀಡಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಮುಜುಗರಕ್ಕೆ ಈಡಾಗಿದ್ದಾರೆ.