Select Page

Advertisement

Video – ನಟ ದರ್ಶನ್ ಬರ್ತಾರಂತ ಅಭಿಮಾನಿಗಳ ಕಿವಿಗೆ ಹೂ ಇಟ್ಟ ಕಾಂಗ್ರೆಸ್ ನಾಯಕರು

Video – ನಟ ದರ್ಶನ್ ಬರ್ತಾರಂತ ಅಭಿಮಾನಿಗಳ ಕಿವಿಗೆ ಹೂ ಇಟ್ಟ ಕಾಂಗ್ರೆಸ್ ನಾಯಕರು

ಕಿತ್ತೂರು : ಸಾಮಾನ್ಯವಾಗಿ ರಾಜಕೀಯ ಕಾರ್ಯಕ್ರಮಗಳಲ್ಲಿ ಹರಸಾಹಸ ಪಟ್ಟು ಜನ ಸೇರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡುವವರು ಹೆಚ್ಚು. ಖ್ಯಾತನಾಮರನ್ನು ಕರೆಯಿಸಿ ಜನರನ್ನ ಕೂಡಿಸುವ ಗಿಮಿಕ್ ಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಇಂತಹದೇ ಒಂದು ಘಟನೆ ಕಿತ್ತೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ. ವಿನಯ್ ಕುಲಕರ್ಣಿ ಅವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಡಿ. ಬಾಸ್ ಅಭಿಮಾನಿಗಳ ಕಿವಿಗೆ ಹೂ ಇಡುವ ಕೆಲಸವನ್ನ ಕಾಂಗ್ರೆಸ್ ನಾಯಕರು ಚೆನ್ನಾಗಿ ಮಾಡಿದ್ದಾರೆ.

ಹೌದು ಕಿತ್ತೂರು ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಹುಟ್ಟು ಹಬ್ಬದ ಸಮಾವೇಶಕ್ಕೆ ಖ್ಯಾತ ನಟ ದರ್ಶನ್ ಆಗಮಿಸುತ್ತಾರೆ ಎಂಬ ಸುದ್ದಿ ಹರಡಲಾಗಿತ್ತು. ಇದನ್ನೇ ಕಾಯುತ್ತಿದ್ದ ಡಿ. ಬಾಸ್ ಅಭಿಮಾನಿಗಳು ಅವರನ್ನ ಕಣ್ತುಂಬಿಕೊಳ್ಳಲು ವೇದಿಕೆಗೆ ಆಗಮಿಸಿದ್ದರು. ಇದನ್ನೇಲ್ಲ ನೋಡಿದ ಕಾರ್ಯಕ್ರಮ ಆಯೋಜಕರು ಡಿ ಬಾಸ್ ಬರುವ ಕುರಿತು ಸುಳಿವು ನೀಡಲಿಲ್ಲ. ಇದಕ್ಕೆ ಅಭಿಮಾನಿಗಳ ಕೂಗಾಟ ಜೋರಾದ ಕಾಂಗ್ರೆಸ್ ನಾಯಕರು ಇವರ ಕಿವಿಗೆ ಹೂ ಇಡುವ ಕೆಲಸವನ್ನ ತುಂಬಾ ಚೆನ್ನಾಗಿ ಮಾಡಲು ಪ್ರಾರಂಭಿಸಿದರು.

ಇನ್ನೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಷಣ ಮಾಡಲು ವೇದಿಕೆಗೆ ಬಂದರು. ಈ‌ ಸಂದರ್ಭದಲ್ಲಿ ಡಿ. ಬಾಸ್ ಅಭಿಮಾನಿಗಳು ಕೂಗಾಟ ಜೋರಾಯ್ತು. ಇದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಡಿ. ಬಾಸ್ ಕಿತ್ತೂರಿಗೆ ಬಂದಿದ್ದಾರೆ ಇನ್ನು ಹತ್ತು ನಿಮಿಷಗಳಲ್ಲಿ ವೇದಿಕೆ ಮೇಲೆ ಬರ್ತಾತೆ ಅಂತ ಹೂ ಕಿವಿಯಲ್ಲಿ ಹೂ ಇಡುವ ಕೆಲಸವನ್ನ ನಿರಂತರವಾಗಿ ಮಾಡಲು ಪ್ರಾರಂಭಿಸಿದರು. ಕೊನೆಗೂ ಡಿ. ಬಾಸ್ ಬರಲಿಲ್ಲ.

ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜಕಾರಣಿಗಳು ಈಗಿನಿಂದಲೇ ಹೂ ಇಡುವ ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಂಡ್ರಾ ಎಂದು ಡಿ. ಬಾಸ್ ಅಭಿಮಾನಿಗಳು ಮಾತನಾಡಿಕೊಂಡ್ರು.‌

Advertisement

Leave a reply

Your email address will not be published. Required fields are marked *