ಕುಂಭಮೇಳಕ್ಕೆ ತೆರಳಿದ್ದ ವಾಹನ ಅಪಘಾತ ; ಗೋಕಾಕ್ ಮೂಲದ 6 ಜನ ಸಾವು
ಬೆಳಗಾವಿ : ಪ್ರಯಾಗರಾಜ್ ಗೆ ತೆರಳಿದ್ದ 6 ಜನ ಪ್ರಯಾಣಿಕರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಬೆಳಗಾವಿ ಜಿಲ್ಲೆಯ ಗೋಕಾಕ ನಿವಾಸಿಗಳು ಎಂದು ತಿಳಿದು ಬಂದಿದೆ.
ಮಧ್ಯಪ್ರದೇಶದ ಜಬಲ್ಪುರನ ಖಿತೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಳಗಿನ ಜಾವ 5 ಗಂಟೆಗೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. KA-49, M-5054 ಸಂಖ್ಯೆ ವಾಹನ.
ಒಟ್ಟು 8 ಜನ ಪ್ರಯಾಣ ಬೆಳೆಸದ್ದರು ಎನ್ನಲಾಗಿದ್ದು ಅವರ ಪೈಕಿ ಆರು ಜನ ತೀರಿ ಹೋಗಿದ್ದು ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ವಾಹನ ಪಲ್ಟಿಯಾಗಿ ಅವಘಡ ಸಂಭವಿಸಿದೆ. ಗಾಯಗೊಂಡ ಇಬ್ಬರನ್ನು ಜಬಲ್ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರ ಹೆಸರುಗಳು ಇನ್ನೂ ತಿಳದು ಬಂದಿಲ್ಲ. ಜಬಲ್ಪುರ ಜಿಲ್ಲಾ ಪೊಲೀಸರೊಂದಿಗೆ ಬೆಳಗಾವಿ ಜಿಲ್ಲಾ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದು ಮೃತರ ಹೆಸರುಗಳು ಇನ್ನಷ್ಟೆ ತಿಳಿದು ಬರಬೇಕಿದೆ.


