ಬೆಳಗಾವಿ : ಲಕ್ಷ್ಮಣ ‌ಸವದಿ ನಾಯಕತ್ವದ ಅವಶ್ಯಕತೆ ಬಿಜೆಪಿಗೆ ಇಲ್ಲ. ಅವರಪ್ಪನಂತ ನಾಯಕರು ನಮ್ಮಲ್ಲಿದ್ದಾರೆ ಎಂದು ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ‌ ನಡೆಸಿದರು.

ಕಾಗವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಗೆ ಲಕ್ಷ್ಮಣ ಸವದಿ ಕರೆತರುವ ಪ್ರಯತ್ನ ನಡೆದಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಬಿಜೆಪಿಗೆ ಸವದಿ‌ ಅಂತಹ ನಾಯಕತ್ವದ ಅವಶ್ಯಕತೆ ಇಲ್ಲ. ನಮ್ಮಲ್ಲೇ ಸಾಕಷ್ಟು ನಾಯಕರಿದ್ದಾರೆ ಎಂದರು.

ಶಾಸಕ ಸವದಿ ಜೊತೆಗೆ ನೇರ ಗುದ್ದಾಟವಿದೆ. ಯಾವುದೇ ರೀತಿಯ ಮುಸುಕಿನ ಗುದ್ದಾಟವಿಲ್ಲ ಎಂದು ರಮೇಶ್ ಜಾರಕಿಹೊಳಿ ಅವರು ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ಹೊರಹಾಕಿದರು.