Select Page

Advertisement

ನವಜಾತ ಶಿಶು ಎಸೆದ ದುರುಳರು ; ಚನ್ನಮ್ಮನ‌ ನಾಡಿನಲ್ಲಿ ಅಮಾನವೀಯ ಘಟನೆ

ನವಜಾತ ಶಿಶು ಎಸೆದ ದುರುಳರು ; ಚನ್ನಮ್ಮನ‌ ನಾಡಿನಲ್ಲಿ ಅಮಾನವೀಯ ಘಟನೆ

ಚನ್ನಮ್ಮನ ಕಿತ್ತೂರು : ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದ ಮರಿಯಮ್ಮನ ಗುಡಿ ಓಣಿಯ ಬಳಿ ನವಜಾತ ಹೆಣ್ಣು ಹಸುಗೂಸು ಪತ್ತೆಯಾಗಿದೆ.

ಅಂಬಡಗಟ್ಟಿ ಗ್ರಾಮದ ಮಹಾದೇವಿ ಮೇಟಿ ಅವರ ಮನೆಯ ಹಿತ್ತಲದಲ್ಲಿ ನವಜಾತ ಹೆಣ್ಣು ಹಸುಗೂಸು ಪತ್ತೆಯಾಗಿದೆ. ನಾಯಿ, ಹಂದಿ ದಾಳಿಗೆ ಕೂಸು ಬಲಿಯಾಗಿದೆ.

ಘಟನಾ ಸ್ಥಳಕ್ಕೆ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಪ್ರವೀಣ ಕೋಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!